ದುಬೈ: ಆರಂಭದಲ್ಲಿ ಸ್ವಲ್ಪ ನರ್ವಸ್ ಆಗಿದ್ದ ನಾನು ಅದಕ್ಕಿಂತಲೂ ಹೆಚ್ಚು ಉತ್ಸುಕನಾಗಿದ್ದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಮೊದಲ ಪಂದ್ಯವನ್ನಾಡಿರುವ ಯುವ ಪ್ಲೇಯರ್ ರವಿ ಬಿಷ್ಣೋಯ್ ಹೇಳಿಕೊಂಡಿದ್ದಾರೆ.
ನಿನ್ನೆ ದೆಹಲಿ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ 4 ಓವರ್ನಲ್ಲಿ ಕೇವಲ 22ರನ್ ನೀಡಿ ಪ್ರಮುಖ ಬ್ಯಾಟ್ಸ್ಮನ್ ರಿಷಭ್ ಪಂತ್ ವಿಕೆಟ್ ಪಡೆದುಕೊಳ್ಳುವಲ್ಲಿ ಬಿಷ್ಣೋಯ್ ಯಶಸ್ವಿಯಾಗಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಕ್ರಿಕೆಟರ್, ನನಗೆ ಮೊದಲ ಪಂದ್ಯ ಆಗಿದ್ದ ಕಾರಣ ಆರಂಭದಲ್ಲಿ ಸ್ವಲ್ಪ ನರ್ವಸ್ಗೆ ಒಳಗಾಗಿದ್ದೇನು. ಆದರೆ ಅದಕ್ಕಿಂತಲೂ ಹೆಚ್ಚು ಉತ್ಸುಕನಾಗಿದ್ದು, ಉತ್ತಮವಾದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಕೊಡುಗೆ ನೀಡಬೇಕು ಎಂಬುದು ನನ್ನ ಆಸೆಯಾಗಿತ್ತು ಎಂದು ಕಿಂಗ್ಸ್ ಪಂಜಾಬ್ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿದ್ದಾರೆ.
-
That moment when you pick up your maiden IPL wicket.
— IndianPremierLeague (@IPL) September 20, 2020 " class="align-text-top noRightClick twitterSection" data="
Welcome to #Dream11IPL, Ravi Bishnoi #DCvKXIP pic.twitter.com/AsPdpoGpin
">That moment when you pick up your maiden IPL wicket.
— IndianPremierLeague (@IPL) September 20, 2020
Welcome to #Dream11IPL, Ravi Bishnoi #DCvKXIP pic.twitter.com/AsPdpoGpinThat moment when you pick up your maiden IPL wicket.
— IndianPremierLeague (@IPL) September 20, 2020
Welcome to #Dream11IPL, Ravi Bishnoi #DCvKXIP pic.twitter.com/AsPdpoGpin
ಮೊದಲ ಪಂದ್ಯದಲ್ಲಿ ಭಾಗಿಯಾಗಿದ್ದ ನನಗೆ ಯಾವುದೇ ರೀತಿಯ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಉತ್ತಮವಾಗಿ ಬೌಲಿಂಗ್ ಮಾಡಬೇಕು ಎಂದುಕೊಂಡಿದ್ದೆ. ಅದೇ ರೀತಿ ಬೌಲ್ ಮಾಡಿದ್ದರಿಂದ ರಿಷಭ್ ಪಂತ್ ವಿಕೆಟ್ ಪಡೆದುಕೊಳ್ಳಲು ಸಹಕಾರಿ ಆಯಿತು ಎಂದಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ಸೂಪರ್ ಓವರ್ನಲ್ಲಿ ಗೆಲುವು ದಾಖಲು ಮಾಡಿದೆ. ಈ ಪಂದ್ಯದಲ್ಲಿ ಅಗರವಾಲ್ 60 ಎಸೆತಗಳಲ್ಲಿ 89ರನ್ಗಳಿಕೆ ಮಾಡಿದ್ದರು.
-
Listen in to sadda debutant who returned with some decent bowling figures tonight! 👇#SaddaPunjab #WakhraSquad #DCvKXIP #IPL2020 pic.twitter.com/4qKmHWdBSQ
— Kings XI Punjab (@lionsdenkxip) September 20, 2020 " class="align-text-top noRightClick twitterSection" data="
">Listen in to sadda debutant who returned with some decent bowling figures tonight! 👇#SaddaPunjab #WakhraSquad #DCvKXIP #IPL2020 pic.twitter.com/4qKmHWdBSQ
— Kings XI Punjab (@lionsdenkxip) September 20, 2020Listen in to sadda debutant who returned with some decent bowling figures tonight! 👇#SaddaPunjab #WakhraSquad #DCvKXIP #IPL2020 pic.twitter.com/4qKmHWdBSQ
— Kings XI Punjab (@lionsdenkxip) September 20, 2020
ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ (17) ಪಡೆದ ಬೌಲರ್ ಆಗಿರುವ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಪದಾರ್ಪಣೆ ಮಾಡಿದ್ದಾರೆ.