ETV Bharat / sports

ಕೊಹ್ಲಿಯ 'ಸ್ಪಿರಿಟ್ ಆಫ್​ ಕ್ರಿಕೆಟ್'ನ ತುಂಬಾ ಇಷ್ಟ ಪಡುತ್ತೇನೆ : ಶೇನ್​ ವಾರ್ನ್​ ಮೆಚ್ಚುಗೆ

author img

By

Published : Feb 8, 2021, 9:21 PM IST

ಇಂಗ್ಲೆಂಡ್​ ಕ್ಯಾಪ್ಟನ್​ ರೂಟ್​ಗೆ ವಿರಾಟ್​ ಕೊಹ್ಲಿ ತಕ್ಷಣ ಓಡಿ ಬಂದು ಕಾಲನ್ನು ಹಿಡಿದು ನೋವು ನಿವಾರಿಸಿಕೊಳ್ಳಲು ನೆರವಾಗುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಕೊಹ್ಲಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು..

Kohli  Spirit of Cricket
ಸ್ಪಿರಿಟ್ ಆಫ್ ಕ್ರಿಕೆಟ್​

ಮೆಲ್ಬೋರ್ನ್​ : ಮೊದಲ ಟೆಸ್ಟ್​ನ ಮೊದಲ ದಿನ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ಸ್ನಾಯು ಸೆಳೆತಕ್ಕೆ ಒಳಗಾಗಿ ನೋವಿನಿಂದ ನರಳಾಡುತ್ತಿದ್ದ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ನಡೆದುಕೊಂಡ ರೀತಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್​ ವಾರ್ನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನಾನು ಇದನ್ನು ಪ್ರೀತಿಸುತ್ತೇನೆ!!!! ತುಂಬಾ ಚೆನ್ನಾಗಿದೆ. ವಿರಾಟ್​ ಕೊಹ್ಲಿ ಮತ್ತು ಜೋ ರೂಟ್ ಮತ್ತೊಂದು ಅದ್ಭುತ ಇನ್ನಿಂಗ್ಸ್​ಗೆ ಅಭಿನಂದನೆಗಳು. #SpiritOfCricket " ಎಂದು ಶೇನ್ ವಾರ್ನ್​ ಟ್ವೀಟ್ ಮಾಡಿದ್ದಾರೆ.

Love this !!!! Well done @imVkohli and congrats to @root66 on another wonderful innings #SpiritOfCricket ❤️ pic.twitter.com/hUBFZfoZ9X

— Shane Warne (@ShaneWarne) February 7, 2021

ಮೊದಲ ಟೆಸ್ಟ್​ನ ಮೊದಲ ದಿನವೇ ಮೈದಾನದಲ್ಲಿ ಗಂಟೆಗಟ್ಟಲೇ ಬ್ಯಾಟಿಂಗ್ ಮಾಡಿದ್ದ ರೂಟ್, ಅಶ್ವಿನ್​ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ನಂತರ ಸ್ನಾಯು ಸೆಳೆತಕ್ಕೊಳಗಾಗಿ ನೋವು ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​ ರೂಟ್​ಗೆ ವಿರಾಟ್​ ಕೊಹ್ಲಿ ತಕ್ಷಣ ಓಡಿ ಬಂದು ಕಾಲನ್ನು ಹಿಡಿದು ನೋವು ನಿವಾರಿಸಿಕೊಳ್ಳಲು ನೆರವಾಗುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಕೊಹ್ಲಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು, ಜೋ ರೂಟ್ ಟೆಸ್ಟ್​ ಕ್ರಿಕೆಟ್​ನ ತಮ್ಮ 100ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ (218)ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿದ್ದಾರೆ.

ಮೆಲ್ಬೋರ್ನ್​ : ಮೊದಲ ಟೆಸ್ಟ್​ನ ಮೊದಲ ದಿನ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ಸ್ನಾಯು ಸೆಳೆತಕ್ಕೆ ಒಳಗಾಗಿ ನೋವಿನಿಂದ ನರಳಾಡುತ್ತಿದ್ದ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ನಡೆದುಕೊಂಡ ರೀತಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್​ ವಾರ್ನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ನಾನು ಇದನ್ನು ಪ್ರೀತಿಸುತ್ತೇನೆ!!!! ತುಂಬಾ ಚೆನ್ನಾಗಿದೆ. ವಿರಾಟ್​ ಕೊಹ್ಲಿ ಮತ್ತು ಜೋ ರೂಟ್ ಮತ್ತೊಂದು ಅದ್ಭುತ ಇನ್ನಿಂಗ್ಸ್​ಗೆ ಅಭಿನಂದನೆಗಳು. #SpiritOfCricket " ಎಂದು ಶೇನ್ ವಾರ್ನ್​ ಟ್ವೀಟ್ ಮಾಡಿದ್ದಾರೆ.

ಮೊದಲ ಟೆಸ್ಟ್​ನ ಮೊದಲ ದಿನವೇ ಮೈದಾನದಲ್ಲಿ ಗಂಟೆಗಟ್ಟಲೇ ಬ್ಯಾಟಿಂಗ್ ಮಾಡಿದ್ದ ರೂಟ್, ಅಶ್ವಿನ್​ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ನಂತರ ಸ್ನಾಯು ಸೆಳೆತಕ್ಕೊಳಗಾಗಿ ನೋವು ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಇಂಗ್ಲೆಂಡ್​ ಕ್ಯಾಪ್ಟನ್​ ರೂಟ್​ಗೆ ವಿರಾಟ್​ ಕೊಹ್ಲಿ ತಕ್ಷಣ ಓಡಿ ಬಂದು ಕಾಲನ್ನು ಹಿಡಿದು ನೋವು ನಿವಾರಿಸಿಕೊಳ್ಳಲು ನೆರವಾಗುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಕೊಹ್ಲಿಯ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇನ್ನು, ಜೋ ರೂಟ್ ಟೆಸ್ಟ್​ ಕ್ರಿಕೆಟ್​ನ ತಮ್ಮ 100ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ (218)ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.