ಢಾಕಾ: ಅಂಡರ್-19 ವಿಶ್ವಕಪ್ ಸೋತರೆ ಭಾರತ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ನೋಡಲು ಬಯಸಿದ್ದೆ ಎಂದು ಬಾಂಗ್ಲಾ ಅಂಡರ್-19 ತಂಡದ ವೇಗಿ ಶೋರಿಫುಲ್ ಇಸ್ಲಾಂ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವ ಮೊದಲು, ಭಾರತ ಏನಾದರೂ ಗೆದ್ದರೆ ಯಾವರೀತಿ ವರ್ತಿಸುತ್ತದೆ ಎಂಬುದನ್ನ ನಾನು ಯೋಚಿಸಿದ್ದೆ. ಹೀಗಾಗಿ ಕೊನೆಯ ಗಳಿಗೆಯವರೆಗೂ ಸೋಲು ಒಪ್ಪಿಕೊಳ್ಳದೆ ಹೋರಾಡಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಎಡಗೈ ವೇಗಿ ಶೋರಿಫುಲ್ ಇಸ್ಲಾಂ ಹೇಳಿದ್ದಾರೆ.
![Bangladesh U19's Shoriful Islam on unruly behavior](https://etvbharatimages.akamaized.net/etvbharat/prod-images/6098860_islam.jpg)
2019 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಕೇವಲ ಒಂದು ರನ್ನಿಂದ ಸೋಲು ಕಂಡೆವು. ಅಂದು ಗೆಲುವು ಸಾಧಿಸಿದ್ದ ಭಾರತ ತಂಡ ಅತಿರೇಕದಿಂದಲೇ ವರ್ತಿಸಿತ್ತು. ಅಂದು ನಾವು ಟೀಂ ಇಂಡಿಯಾ ಮೇಲೆ ಯಾವುದೇ ಆರೋಪ ಮಾಡಿರಲಿಲ್ಲ. ಬದಲಿಗೆ ನಮ್ಮ ಸಮಯಕ್ಕಾಗಿ ನಾವು ಕಾಯುತ್ತಿದ್ದೆವು ಎಂದಿದ್ದಾರೆ.
ಮೈದಾನದಲ್ಲೇ ಅಸಭ್ಯವಾಗಿ ವರ್ತನೆ ತೋರಿರುವ ಬಾಂಗ್ಲಾದೇಶದ ಮೂವರು ಪ್ಲೇಯರ್ಸ್ ಹಾಗೂ ಭಾರತದ ಇಬ್ಬರು ಆಟಗಾರರ ವಿರುದ್ಧ ಐಸಿಸಿ ಕ್ರಮಕೈಗೊಂಡಿದೆ. ಟೀಂ ಇಂಡಿಯಾದ ರವಿ ಬಿಷ್ಣೋಯ್ ಮತ್ತು ಆಕಾಶ್ ಸಿಂಗ್ ಹಾಗೂ ಬಾಂಗ್ಲಾದ ಮೊಹಮ್ಮದ್ ಹೃದೋಯ್, ಶಮೀಮ್ ಹೊಸೈನ್, ರಕಿಬುಲ್ ಹುಸೇನ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ.