ನವದೆಹಲಿ: ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ದಿಗ್ಗಜರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಪ್ರಕಟಿಸುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗರ ಸೆಹ್ವಾಗ್ ಘೋಷಿಸಿದ ತಂಡದಲ್ಲಿ ಕೆಲವು ಅಚ್ಚರಿ ಕಂಡುಬಂದಿದೆ.
ಸೆಹ್ವಾಗ್ ತಂಡದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ, ಆರೆಂಜ್ ಕ್ಯಾಪ್ ವಿನ್ನರ್ ಕೆಎಲ್ ರಾಹುಲ್ ಹಾಗೂ ಆರ್ಸಿಬಿ ತಂಡದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ರನ್ನು ಆರಂಭಿಕರಾಗಿದ್ದರೆ, ಮೂರನೇ ಕ್ರಮಾಂದಕಲ್ಲಿ ಮುಂಬೈ ತಂಡದ ಸೂರ್ಯಕುಮಾರ್ ಯಾದವ್, 4ನೇ ಕ್ರಮಾಂಕ ಮತ್ತು ನಾಯಕನಾಗಿ ವಿರಾಟ್ ಕೊಹ್ಲಿಯನ್ನು ನೇಮಿಸಿದ್ದಾರೆ. ಕೊಹ್ಲಿ ಅವರ ಅಗ್ರಸಿವ್ ಮನೋಭಾವವೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಕಾರಣ ಎಂದು ವೀರೂ ಹೇಳಿದ್ದಾರೆ.
ಮಧ್ಯಮ ಕ್ರಮಾಂಕಗಳಾದ 5 ರಲ್ಲಿ ಡೇವಿಡ್ ವಾರ್ನರ್, 6ನೇ ಕ್ರಮಾಂಕದಲ್ಲಿ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅರ್ಹರಾಗಿದ್ದರು, ಆದರೆ ಟೂರ್ನಿಯ ಒಟ್ಟಾರೆ ಪ್ರದರ್ಶನದ ಮೇರೆಗೆ ವಿಲಿಯರ್ಸ್ರನ್ನು ಆಯ್ಕೆ ಮಾಡಿರುವುದಾಗಿ ಸೆಹ್ವಾಗ್ ಹೇಳಿದ್ದಾರೆ.
ಬೌಲರ್ಗಳಲ್ಲಿ ಕಗಿಸೋ ರಬಡಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಸ್ಪಿನ್ನರ್ ವಿಭಾಗದಲ್ಲಿ ಚಹಾಲ್ ಮತ್ತು ರಶೀದ್ ಖಾನ್ರನ್ನು ಆಯ್ಕೆ ಮಾಡಿದ್ದಾರೆ. 12ನೇ ಆಟಗಾರನಾಗಿ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ರನ್ನು ಆಯ್ಕೆ ಮಾಡಿದ್ದಾರೆ.
ಆದರೆ ಟೂರ್ನಿಯಲ್ಲಿನ ಗರಿಷ್ಟ ರನ್ಗಳಿಸಿರುವ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಬದಲಿಗೆ ಪಡಿಕ್ಕಲ್ರನ್ನು, ಆರ್ಚರ್ರನ್ನು ಕೈಬಿಟ್ಟಿರುವುದಕ್ಕೆ ಕೆಲವು ಅಭಿಮಾನಿಗಳು ಆಶ್ಚರ್ಯವ್ಯಕ್ತಪಡಿಸಿದ್ದಾರೆ.
ವಿರೇಂದ್ರ ಸೆಹ್ವಾಗ್ ಐಪಿಎಲ್ ತಂಡ
ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಎಬಿ ಡಿವಿಲಿಯರ್ಸ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಶಮಿ, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ