ಹೈದರಾಬಾದ್: ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಕೊಹ್ಲಿ ನೇತೃತ್ವದ ತಂಡ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಪದೇ ಪದೆ ಬದಲಾವಣೆ ಮಾಡಿದ್ದನ್ನು ಡೆಲ್ಲಿ ಡ್ಯಾಶರ್ ವಿರೇಂದ್ರ ಸೆಹ್ವಾಗ್ ಖಂಡಿಸಿದ್ದಾರೆ.
ಇಂದು ನಡೆಯುವ ಅಂತಿಮ ಟಿ 20 ಪಂದ್ಯದಲ್ಲಿ ಸ್ಯಾಮ್ಸನ್ ಬದಲು ಮನೀಶ್ ಪಾಂಡೆಗೆ ಸ್ಥಾನ ನೀಡುವಂತೆ ಸೆಹ್ವಾಗ್ ಆಗ್ರಹಿಸಿದ್ದಾರೆ.
ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ, ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿ ಅವಕಾಶ ಸಿಗದ ಆಟಗಾರರಿಗೆ ಅವಕಾಶ ನೀಡಬಹುದು. ಎರಡನೇ ಪಂದ್ಯದಲ್ಲಿ ಶಮಿ, ಬುಮ್ರಾ, ಸೈನಿ, ಮಯಾಂಕ್ ಅಗರ್ವಾಲ್ ಬೆಂಚ್ ಕಾದಿದ್ದರು. ಆದರೆ, ಮನೀಶ್ ಪಾಂಡೆ ಗಾಯದ ಸಮಸ್ಯೆಯಿಂದ ಕಣಕ್ಕೆ ಇಳಿದಿರಲಿಲ್ಲ.
ಓದಿ: ಎಕ್ಸ್ಕ್ಲೂಸಿವ್: ಟಿ-20 ವಿಶ್ವಕಪ್ ವೇಳೆಗೆ ಭಾರತ ತಂಡಕ್ಕೆ ಮರಳಲು ಸಜ್ಜಾಗುತ್ತಿದ್ದೇನೆ: ವಿಜಯ್ ಶಂಕರ್
ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಮನೀಶ್ ಪಾಂಡೆ, ಮೊದಲನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದು ಕೇವಲ 2 ರನ್ ಗಳಿಸಿದ್ದರು. ಕರ್ನಾಟಕದ ಆಟಗಾರ ಅಂತಿಮ 11ರಲ್ಲಿ ಅವಕಾಶ ಪಡೆಯಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಒಂದು ವೇಳೆ ಮೂರನೇ ಹಾಗೂ ಅಂತಿಮ ಪಂದ್ಯಕ್ಕೂ ಬದಲಾವಣೆ ಮಾಡುವುದಾದರೆ, ಮನೀಶ್ ಪಾಂಡೆ ಫಿಟ್ ಆಗಿದ್ದರೆ ಅವರನ್ನು ಆಡಿಸಲಿ. ಸಂಜು ಸ್ಯಾಮ್ಸನ್ ಅವರ ಸ್ಥಾನಕ್ಕೆ ಪಾಂಡೆ ಕಣಕ್ಕಿಳಿಯಲಿ ಎಂದು ಸೆಹ್ವಾಗ್ ಹೇಳಿದ್ದಾರೆ.