ದುಬೈ: ಭಾರತ ತಂಡದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಬೌಲರ್ಗಳ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ - ಐರ್ಲೆಂಡ್ ಸರಣಿ ಮುಗಿದ ನಂತರ ಐಸಿಸಿ ಬುಧವಾರ ಏಕದಿನ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಪಂದ್ಯಗಳಿಂದ ಎರಡು ಅರ್ಧಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದರೆ, ರೋಹಿತ್ ಶರ್ಮಾ ಟೂರ್ನಿಯಲ್ಲಿ ಆಡದಿದ್ದರೂ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 3ನೇ ಸ್ಥಾನದಲ್ಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 7 ವಿಕೆಟ್ ಪಡೆದ ಮೆಹೆದಿ ಹಸನ್ ರ‍್ಯಾಂಕಿಂಗ್‌ನಲ್ಲಿ 9 ಸ್ಥಾನ ಜಿಗಿತ ಕಂಡು 4ನೇ ಸ್ಥಾನಕ್ಕೇರಿದ್ದಾರೆ. ವೇಗಿ ಮುಸ್ತಫಿಜುರ್ ರಹಮಾನ್ 19ರಿಂದ 8ನೇ ಸ್ಥಾನಕ್ಕೆ ಬಡ್ತಿ ಪಡೆದರೆ, ನಿಷೇಧದಿಂದ ಹೊರಬಂದಿರುವ ಶಕಿಬ್ ಅಲ್ ಹಸನ್ 28ನೇ ರ‍್ಯಾಂಕಿಂಗ್‌ನಿಂದ 15 ನೇಸ್ಥಾನಕ್ಕೇರಿದ್ದಾರೆ.
-
Rashid Khan has moved up one spot to No.6 in the @MRFWorldwide ICC Men's ODI Rankings for all-rounders.
— ICC (@ICC) January 27, 2021 " class="align-text-top noRightClick twitterSection" data="
📈 Full rankings: https://t.co/tHR5rKl2SH pic.twitter.com/rFkD7vuxnf
">Rashid Khan has moved up one spot to No.6 in the @MRFWorldwide ICC Men's ODI Rankings for all-rounders.
— ICC (@ICC) January 27, 2021
📈 Full rankings: https://t.co/tHR5rKl2SH pic.twitter.com/rFkD7vuxnfRashid Khan has moved up one spot to No.6 in the @MRFWorldwide ICC Men's ODI Rankings for all-rounders.
— ICC (@ICC) January 27, 2021
📈 Full rankings: https://t.co/tHR5rKl2SH pic.twitter.com/rFkD7vuxnf
ಬೌಲರ್ಗಳ ಲಿಸ್ಟ್ನಲ್ಲಿ ಮೊದಲ ಮೂರು ಸ್ಥಾನಗಳನ್ನು ಟ್ರೆಂಟ್ ಬೌಲ್ಟ್, ಮುಜೀಬ್ ಉರ್ ರಹಮಾನ್ ಮತ್ತು ಜಸ್ಪ್ರೀತ್ ಬುಮ್ರಾ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧ 2 ಶತಕ ಸಹಿತ 285 ರನ್ಗಳಿಸಿದ್ಧ ಐರ್ಲೆಂಡ್ ಆಲ್ರೌಂಡರ್ ಪಾಲ್ ಸ್ಟಿರ್ಲಿಂಗ್ 8 ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
-
↗️ Mehidy Hasan storms into top five
— ICC (@ICC) January 27, 2021 " class="align-text-top noRightClick twitterSection" data="
↗️ Mustafizur Rahman enters top 10
↗️ Shakib Al Hasan moves up 15 spots
Bangladesh bowlers sizzle in the latest @MRFWorldwide ICC Men's ODI Player Rankings!
📈 Full rankings: https://t.co/tHR5rKl2SH pic.twitter.com/2uDyRgfznH
">↗️ Mehidy Hasan storms into top five
— ICC (@ICC) January 27, 2021
↗️ Mustafizur Rahman enters top 10
↗️ Shakib Al Hasan moves up 15 spots
Bangladesh bowlers sizzle in the latest @MRFWorldwide ICC Men's ODI Player Rankings!
📈 Full rankings: https://t.co/tHR5rKl2SH pic.twitter.com/2uDyRgfznH↗️ Mehidy Hasan storms into top five
— ICC (@ICC) January 27, 2021
↗️ Mustafizur Rahman enters top 10
↗️ Shakib Al Hasan moves up 15 spots
Bangladesh bowlers sizzle in the latest @MRFWorldwide ICC Men's ODI Player Rankings!
📈 Full rankings: https://t.co/tHR5rKl2SH pic.twitter.com/2uDyRgfznH
ಆಲ್ರೌಂಡರ್ ಶ್ರೇಯಾಂಕದಲ್ಲಿ ರಶೀದ್ ಖಾನ್ ಒಂದು ಸ್ಥಾನ ಏರಿಕೆ ಕಂಡು 6ಕ್ಕೆ ಬಡ್ತಿ ಪಡೆದಿದ್ದಾರೆ. ಉಳಿದಂತೆ ಶಕಿಬ್, ನಬಿ, ವೋಕ್ಸ್, ಸ್ಟೋಕ್ಸ್ ಮತ್ತು ಇಮದ್ ವಾಸೀಮ್ ಅಗ್ರ 5 ರಲ್ಲೇ ಉಳಿದುಕೊಂಡಿದ್ದಾರೆ. ಭಾರತದ ಜಡೇಜಾ 7ನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ:ಕೊನೆಯ 3 ಎಸೆತದಲ್ಲಿ 15 ರನ್ ಸಿಡಿಸಿದ ಸೋಲಂಕಿ : ಸೆಮಿಫೈನಲ್ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!