ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆ ನಾಡಿದ್ದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಬಲಿಷ್ಠ ತಂಡ ಕಟ್ಟಿಕೊಳ್ಳುವ ಉದ್ದೇಶದಿಂದ ಕೆಲ ಪ್ರಮುಖ ಪ್ಲೇಯರ್ಸ್ಗಳಿಗೆ ಪ್ರಾಂಚೈಸಿಗಳು ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಆವೃತ್ತಿ ಆರಂಭವಾಗಿದಾಗಿನಿಂದಲೂ ಚಾಂಪಿಯನ್ ಪಟ್ಟ ಅಲಂಕಾರ ಮಾಡುವಲ್ಲಿ ವಿಫಲಗೊಂಡಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಸಹ ಈ ಸಲ ಕೆಲ ಯಂಗ್ ಪ್ಲೇಯರ್ಗಳ ಮೇಲೆ ಕಣ್ಣಿಟ್ಟಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವ ತವಕದಲ್ಲಿದೆ. ಇದರ ಮಧ್ಯೆ ಟೀಂ ಇಂಡಿಯಾ ಹಾಗೂ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತನ್ನ ತಂಡದ ಫ್ಯಾನ್ಸ್ಗೆ ಹೃದಯಸ್ಪರ್ಶಿ ಸಂದೇಶ ರವಾನೆ ಮಾಡಿದ್ದಾರೆ.
-
All set for the #IPLAuction? The Captain has a message for you.@imVkohli #ViratKohli #BidForBold #IPL2020 #PlayBold pic.twitter.com/moGkXCz31y
— Royal Challengers (@RCBTweets) December 17, 2019 " class="align-text-top noRightClick twitterSection" data="
">All set for the #IPLAuction? The Captain has a message for you.@imVkohli #ViratKohli #BidForBold #IPL2020 #PlayBold pic.twitter.com/moGkXCz31y
— Royal Challengers (@RCBTweets) December 17, 2019All set for the #IPLAuction? The Captain has a message for you.@imVkohli #ViratKohli #BidForBold #IPL2020 #PlayBold pic.twitter.com/moGkXCz31y
— Royal Challengers (@RCBTweets) December 17, 2019
ಕೊಹ್ಲಿ ಹೇಳಿದ್ದೇನು!? ನಮ್ ಹುಡುಗ್ರೇ, ಆರ್ಸಿಬಿ ಫ್ಯಾನ್ಸ್ಗಳೇ ನಮಸ್ಕಾರ... ನಿಮ್ಮಕಡೆಯಿಂದ ನಾವು ಅತಿದೊಡ್ಡ ಪ್ರೀತಿ ಮತ್ತು ವಾತ್ಸಲ್ಯ ಸ್ವೀಕರಿಸಿದ್ದೇವೆ. ಮುಂಬರುವ ಆವೃತ್ತಿಗೆ ನಿಮ್ಮೆಲ್ಲರ ಪ್ರೀತಿ ನಮಗೆ ಬೇಕು. ಎಲ್ಲರಿಗೂ ತಿಳಿದಿರುವಂತೆ ಐಪಿಎಲ್ ಹರಾಜು ಪ್ರಕ್ರಿಯೆ ಬಂದಿದೆ. ತಂಡಕ್ಕೆ ಯಾರು ಸೇರಿಕೊಳ್ಳಲಿದ್ದಾರೆ ಎಂಬ ತವಕ ನಿಮ್ಮಲ್ಲಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದಂತೆ ನಮ್ಮ ಮ್ಯಾನೆಜ್ಮೆಂಟ್ ಕೆಲಸ ಮಾಡುತ್ತಿದ್ದು, ಕೆಲವು ಸುತ್ತಿನ ಚರ್ಚೆ ಸಹ ನಡೆದಿವೆ. 2020ರಲ್ಲಿ ಉತ್ತಮ ತಂಡ ಹೊಂದಲು ನಾವು ನಿಮಗೆ ಭರವಸೆ ನೀಡುತ್ತೇವೆ. ನಿಮ್ಮ ಬೆಂಬಲ ಯಾವಾಗಲೂ ನಮಗೆ ಅಮೂಲ್ಯವಾದದು ಎಂದು ಟ್ವೀಟ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.