ETV Bharat / sports

ಸನ್​ರೈಸರ್ಸ್​ ವಿರುದ್ಧ ಗೆದ್ದರೆ ಧೋನಿ, ರೋಹಿತ್, ಗಂಭೀರ್​ ಸಾಲಿಗೆ ಸೇರಲಿದ್ದಾರೆ ಕೊಹ್ಲಿ!! - SRH vs RCB live update

ಸೋಮವಾರ ನಡೆಯುವ ಪಂದ್ಯದಲ್ಲಿ ಎಸ್​ಆರ್​ಹೆಚ್​ ತಂಡವನ್ನು ಆರ್​ಸಿಬಿ ಮಣಿಸಿದ್ರೆ, ಕೊಹ್ಲಿ ಆರ್​ಸಿಬಿ ನಾಯಕನಾಗಿ 50 ಗೆಲುವು ಸಾಧಿಸಿದಂತಾಗುತ್ತದೆ. ಈ ಮೂಲಕ ಐಪಿಎಲ್‌ನಲ್ಲಿ 50 ಪಂದ್ಯ ಗೆಲುವು ಪಡೆದ 4ನೇ ನಾಯಕ ಎನಿಸಿಕೊಳ್ಳಲಿದ್ದಾರೆ..

ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ
author img

By

Published : Sep 21, 2020, 4:21 PM IST

Updated : Sep 21, 2020, 5:06 PM IST

ದುಬೈ: 13ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸನ್​ರೈಸರ್ಸ್​ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಆರ್​ಸಿಬಿ ನಾಯಕ ಕೊಹ್ಲಿಗೆ ಈ ಪಂದ್ಯ ಮಹತ್ವದ್ದಾಗಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಕೊಹ್ಲಿ ನಾಯಕನಾಗಿ 50 ಪಂದ್ಯ ಗೆದ್ದ ದಾಖಲೆಗೆ ಪಾತ್ರರಾಗಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿ ಲೀಗ್ ಮುಗಿಸಿದ್ದ ಆರ್​ಸಿಬಿ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ. ಯಾಕೆಂದರೆ, ತಂಡದಲ್ಲಿದ್ದ ಹಲವಾರು ನ್ಯೂನತೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಆರಂಭಿಕರಾಗಿ ಆಸೀಸ್​ ನಾಯಕ ಫಿಂಚ್​, ಬೌಲಿಂಗ್​ ವಿಭಾಗದಲ್ಲಿ ಸ್ಟೈನ್​, ಮೊರೀಸ್​ ಹಾಗೂ ಯುವ ಆಟಗಾರ ದೇವದತ್​ ಪಡಿಕ್ಕಲ್​ ತಂಡದಲ್ಲಿ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತ.

ಸೋಮವಾರ ನಡೆಯುವ ಪಂದ್ಯದಲ್ಲಿ ಎಸ್​ಆರ್​ಹೆಚ್​ ತಂಡವನ್ನು ಆರ್​ಸಿಬಿ ಮಣಿಸಿದ್ರೆ, ಕೊಹ್ಲಿ ಆರ್​ಸಿಬಿ ನಾಯಕನಾಗಿ 50 ಗೆಲುವು ಸಾಧಿಸಿದಂತಾಗುತ್ತದೆ. ಈ ಮೂಲಕ ಐಪಿಎಲ್‌ನಲ್ಲಿ 50 ಪಂದ್ಯ ಗೆಲುವು ಪಡೆದ 4ನೇ ನಾಯಕ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್​ನ ಎಂಎಸ್​ ಧೋನಿ(100), ಕೋಲ್ಕತ್ತಾ ನೈಟ್​ ರೈಡರ್ಸ್​ನ ಗೌತಮ್​ ಗಂಭೀರ್​(71) ಹಾಗೂ ಮುಂಬೈ ಇಂಡಿಯನ್ಸ್​ ತಂಡದ ನಾಯಕನಾಗಿ ರೋಹಿತ್​ ಶರ್ಮಾ(60) 50 ಗೆಲುವು ಪಡೆದಿರುವ ನಾಯಕರಾಗಿದ್ದಾರೆ.

ಕೊಹ್ಲಿ ಈ ಪಂದ್ಯದಲ್ಲಿ 20 ರನ್​ಗಳಿಸಿದ್ರೆ ಶೇನ್ ವಾಟ್ಸನ್​ರನ್ನು ಹಿಂದಿಕ್ಕಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗರಿಷ್ಠ ರನ್​ ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ. ಜೊತೆಗೆ 10 ಸಿಕ್ಸರ್​ ಸಿಡಿಸಿದ್ರೆ 200 ಸಿಕ್ಸರ್​ ಸಿಡಿಸಿದ 4ನೇ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ. ಆದರೆ, ಈ ಹಿಂದಿನ ದಾಖಲೆಗಳನ್ನು ಗಮನಿಸಿದ್ರೆ ಕೊಹ್ಲಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ದಾಖಲಿಸಿದ್ದಾರೆ. ಅವರು 11 ಇನ್ನಿಂಗ್ಸ್​ಗಳಲ್ಲಿ 113ರ ಸ್ಟ್ರೈಕ್​ರೇಟ್​ನಲ್ಲಿ 235 ರನ್​ಗಳಿಸಿದ್ದಾರೆ.

Last Updated : Sep 21, 2020, 5:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.