ETV Bharat / sports

ಬಾಂಗ್ಲಾ ವಿರುದ್ಧದ ಟಿ-20 ಸರಣಿಯಿಂದ ಕ್ಯಾಪ್ಟನ್​ ಕೊಹ್ಲಿಗೆ ವಿಶ್ರಾಂತಿ!? - ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ಸತತವಾಗಿ ಕ್ರಿಕೆಟ್​ ಸರಣಿಗಳಲ್ಲಿ ಭಾಗಿಯಾಗುತ್ತಿರುವ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮುಂಬರುವ ಬಾಂಗ್ಲಾ ವಿರುದ್ಧದ ಟಿ-20 ಕ್ರಿಕೆಟ್​​ನಿಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ವಿರಾಟ್​​ ಕೊಹ್ಲಿ
author img

By

Published : Oct 19, 2019, 4:39 PM IST

ಮುಂಬೈ: ಮುಂದಿನ ತಿಂಗಳು ಬಾಂಗ್ಲಾ ವಿರುದ್ಧ ಆರಂಭಗೊಳ್ಳಲಿರುವ ಮೂರು ಟಿ-20 ಪಂದ್ಯಗಳ ಸರಣಿಯಿಂದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೊರಗುಳಿಯುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿವೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ವಿರಾಟ್​ ಕೊಹ್ಲಿ ಈಗಾಗಲೇ ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್​ ಸರಣಿಯಿಂದ ವಿಶ್ರಾಂತಿ ಪಡೆದುಕೊಳ್ಳಬೇಕಾಗಿತ್ತು. ಆದರೆ ಈ ಸರಣಿಯಲ್ಲಿ ಭಾಗಿಯಾಗಿರುವ ಕಾರಣ, ಮುಂದಿನ ಬಾಂಗ್ಲಾ ವಿರುದ್ಧದ ಚುಟುಕು ಕ್ರಿಕೆಟ್​​ನಿಂದ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ನವೆಂಬರ್​ 3 ರಿಂದ ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, 2ನೇ ಪಂದ್ಯ ನ.7ಕ್ಕೆ ರಾಜ್​ಕೋಟ್ ಮತ್ತು ಮೂರನೇ ಪಂದ್ಯ ನ.10ಕ್ಕೆ​ ನಾಗ್ಪುರ್​ನಲ್ಲಿ ನಡೆಯಲಿದೆ. ಇದಕ್ಕಾಗಿ ಇದೇ ತಿಂಗಳ 24 ರಂದು ಟೀಂ ಇಂಡಿಯಾ ಕೂಡ 15 ಆಟಗಾರರ ತಂಡ ಪ್ರಕಟಿಸಲಿದೆ.

ಇಂಗ್ಲೆಂಡ್​​ನಲ್ಲಿ ಮುಕ್ತಾಯಗೊಂಡ ವಿಶ್ವಕಪ್​ ಕ್ರಿಕೆಟ್​​ನಿಂದಲೂ ಕೊಹ್ಲಿ ನಿರಂತರವಾಗಿ ಕ್ರಿಕೆಟ್​​ನಲ್ಲಿ ಭಾಗಿಯಾಗುತ್ತಿರುವುದರಿಂದ ಅವ ಮೇಲೆ ಹೆಚ್ಚಿನ ಕೆಲಸದ ಒತ್ತಡ ಸಹ ಬಿದ್ದಿದ್ದು, ಈ ಬೆನ್ನಲ್ಲೇ ಆಯ್ಕೆ ಸಮಿತಿ ರೋಹಿತ್​ ಶರ್ಮಾಗೆ ನಾಯಕನ ಪಟ್ಟ ಕಟ್ಟುವ ಸಾಧ್ಯತೆ ಇದೆ.

Intro:Body:

ಬಾಂಗ್ಲಾ ವಿರುದ್ಧದ ಟಿ-20 ಸರಣಿಯಿಂದ ಕ್ಯಾಪ್ಟನ್​ ಕೊಹ್ಲಿಗೆ ವಿಶ್ರಾಂತಿ!? 

ಮುಂಬೈ: ಮುಂದಿನ ತಿಂಗಳು ಬಾಂಗ್ಲಾ ವಿರುದ್ಧ ಆರಂಭಗೊಳ್ಳಲಿರುವ ಮೂರು ಟಿ20 ಪಂದ್ಯಗಳ ಸರಣಿಯಿಂದ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹೊರಗುಳಿಯುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿವೆ. 

ಲಭ್ಯವಾಗಿದ್ದ ಮಾಹಿತಿ ಪ್ರಕಾರ ವಿರಾಟ್​ ಕೊಹ್ಲಿ ಈಗಾಗಲೇ ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್​ ಸರಣಿಯಿಂದ ವಿಶ್ರಾಂತಿ ಪಡೆದುಕೊಳ್ಳಬೇಕಾಗಿತ್ತು. ಆದರೆ ಈ ಸರಣಿಯಲ್ಲಿ ಭಾಗಿಯಾಗಿರುವ ಕಾರಣ, ಮುಂದಿನ ಬಾಂಗ್ಲಾ ವಿರುದ್ಧದ ಚುಟುಕು ಕ್ರಿಕೆಟ್​​ನಿಂದ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 

ನವೆಂಬರ್​ 3 ರಿಂದ ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, 2ನೇ ಪಂದ್ಯ ನ.7ಕ್ಕೆ ರಾಜ್​ಕೋಟ್ ಮತ್ತು ಮೂರನೇ ಪಂದ್ಯ ನ.10ಕ್ಕೆ​ ನಾಗ್ಪುರ್​ನಲ್ಲಿ ನಡೆಯಲಿದೆ. ಇದಕ್ಕಾಗಿ ಇದೇ ತಿಂಗಳ 24 ರಂದು ಟೀಂ ಇಂಡಿಯಾ ಕೂಡ 15 ಆಟಗಾರರ ತಂಡ ಪ್ರಕಟಿಸಲಿದೆ.

ಇಂಗ್ಲೆಂಡ್​​ನಲ್ಲಿ ಮುಕ್ತಾಯಗೊಂಡ ವಿಶ್ವಕಪ್​ ಕ್ರಿಕೆಟ್​​ನಿಂದಲೂ ಕೊಹ್ಲಿ ನಿರಂತರವಾಗಿ ಕ್ರಿಕೆಟ್​​ನಲ್ಲಿ ಭಾಗಿಯಾಗುತ್ತಿರುವುದರಿಂದ ಅವ ಮೇಲೆ ಹೆಚ್ಚಿನ ಕೆಲಸದ ಒತ್ತಡ ಸಹ ಬಿದ್ದಿದ್ದು, ಈ ಬೆನ್ನಲ್ಲೇ ಆಯ್ಕೆ ಸಮಿತಿ ರೋಹಿತ್​ ಶರ್ಮಾಗೆ ನಾಯಕನ ಪಟ್ಟ ಕಟ್ಟುವ ಸಾಧ್ಯತೆ ಇದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.