ETV Bharat / sports

ಧೋನಿ ನಿವೃತ್ತಿ ವರದಿಗೆ ಕೊಹ್ಲಿ ಗರಂ; ಸುದ್ದಿಗೋಷ್ಠಿಯಲ್ಲಿ ವಿರಾಟ್​ ಮಾತು

ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಧರ್ಮಶಾಲಾ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್​ ಕೊಹ್ಲಿ ಮಾತನಾಡಿದ್ರು.

ವಿರಾಟ್​​ ಕೊಹ್ಲಿ ಸುದ್ದಿಗೋಷ್ಠಿ
author img

By

Published : Sep 14, 2019, 4:51 PM IST

ಧರ್ಮಶಾಲಾ: ಟೀಂ ಇಂಡಿಯಾದ ಹಿರಿಯ ಅನುಭವಿ ಆಟಗಾರ ಎಂಎಸ್​ ಧೋನಿ ನಿವೃತ್ತಿ ಬಗ್ಗೆ ಹಬ್ಬಿರುವ ನಿವೃತ್ತಿ ಸುದ್ದಿಗೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸದಾ ಭಾರತದ​ ಕ್ರಿಕೆಟ್​ ಬಗ್ಗೆ ಚಿಂತಿಸುವ ಅವರ ಸ್ಥಾನವನ್ನು ಮತ್ತೊಬ್ಬ ಆಟಗಾರನಿಂದ ತುಂಬಲು ಸಾಧ್ಯವಿಲ್ಲ ಎಂದು ಕೊಂಡಾಡಿದ್ರು.

ಭಾರತೀಯ​ ಕ್ರಿಕೆಟ್​ಗೆ ಧೋನಿ ನೀಡಿದ ಕೊಡುಗೆ ಶ್ಲಾಘಿಸಿದ ರನ್​ ಮಷಿನ್​, ನಿವೃತ್ತಿ ತೆಗೆದುಕೊಳ್ಳುವ ಸಂಪೂರ್ಣ ಜವಾಬ್ದಾರಿ ಅವರಿಗೆ ಬಿಟ್ಟಿದ್ದು, ಆ ವಿಷಯದಲ್ಲಿ ಯಾರೂ ಕೂಡಾ ತಮ್ಮ ಅಭಿಪ್ರಾಯ ನೀಡಬಾರದು ಎಂದು ಸೂಚನೆ ನೀಡಿದ್ರು.

Virat Kohli /ms dhoni
ವಿರಾಟ್​,ಎಂಎಸ್​ ಧೋನಿ

ಕಳೆದ ಕೆಲ ದಿನಗಳ ಹಿಂದೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಧೋನಿ ಜತೆಗಿನ ಫೋಟೊ ಶೇರ್​ ಮಾಡಿದ್ದರು. ಈ ಫೋಟೋ ಶೇರ್​ ಆಗುತ್ತಿದ್ದಂತೆ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಮತ್ತಷ್ಟು ಮುನ್ನೆಲೆಗೆ ಬಂದಿತ್ತು. ಜತೆಗೆ ಐಸಿಸಿ ಏಕದಿನ ಕ್ರಿಕೆಟ್​ ಟೂರ್ನಿ ಮುಕ್ತಾಯಗೊಳ್ತಿದ್ದಂತೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ತಾರೆ ಎಂದೇ ಹೇಳಲಾಗಿತ್ತು.

ವೆಸ್ಟ್​ ಇಂಡೀಸ್​, ದಕ್ಷಿಣ ಆಫ್ರಿಕಾ ವಿರುದ್ಧದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಗಾಗಿ ಧೋನಿ ಆಯ್ಕೆಯಾಗಿರಲಿಲ್ಲ. ಹೀಗಾಗಿ ಅವರ ನಿವೃತ್ತಿ ಖಚಿತ ಎಂದು ಕೆಲ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆದರೆ ಅದು ಅಪ್ಪಟ ಸುಳ್ಳು. ಧೋನಿ ನಿವೃತ್ತಿ ಕೈಗೊಳ್ಳುವ ಯಾವುದೇ ಮಾಹಿತಿ ನಮ್ಮ ಮುಂದಿಲ್ಲಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ತಿಳಿಸಿದ್ದರು.

Intro:Body:

ಧೋನಿ ನಿವೃತ್ತಿ ವರದಿಗೆ ಕೊಹ್ಲಿ ಗರಂ.... ಸುದ್ದಿಗೋಷ್ಠಿಯಲ್ಲಿ ವಿರಾಟ್​ ತಿಳಿಸಿದ್ರು ಈ ಮಾತು! 

ಧರ್ಮಶಾಲಾ: ಟೀಂ ಇಂಡಿಯಾದ ಹಿರಿಯ ಕ್ರಿಕೆಟರ್​ ಎಂಎಸ್​ ಧೋನಿ ನಿವೃತ್ತಿ ಬಗ್ಗೆ ಹಬ್ಬಿದ್ದ ಸುದ್ದಿಗೆ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಂಡಿಯನ್​​ ಕ್ರಿಕೆಟ್​ ಬಗ್ಗೆ ಚಿಂತಿಸುವ ಅವರ ಸ್ಥಾನ ಇನ್ನೊಬ್ಬ ಆಟಗಾರನಿಂದ ತುಂಬಲು ಅಸಾಧ್ಯ ಎಂದು ತಿಳಿಸಿದ್ದಾರೆ. 

ಇಂಡಿಯನ್​ ಕ್ರಿಕೆಟ್​ಗೆ ಧೋನಿ ನೀಡಿದ್ದ ಕೊಡುಗೆ ಶ್ಲಾಘಿಸಿದ ರನ್​ ಮಷಿನ್​ ಕೊಹ್ಲಿ, ನಿವೃತ್ತಿ ತೆಗೆದುಕೊಳ್ಳುವ ಸಂಪೂರ್ಣ ಜವಾಬ್ದಾರಿ ಅವರಿಗೆ ಬಿಟ್ಟಿದ್ದು, ಆ ವಿಷಯದಲ್ಲಿ ಯಾರು ತಮ್ಮ ಅಭಿಪ್ರಾಯ ನೀಡಬಾರದು ಎಂದಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಧೋನಿ ಜತೆಗಿನ ಫೋಟೊವೊಂದನ್ನ ಶೇರ್​ ಮಾಡಿದ್ದರು. ಈ ಫೋಟೋ ಶೇರ್​ ಆಗುತ್ತಿದ್ದಂತೆ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಮತ್ತಷ್ಟು ಮುನ್ನಾಲೆಗೆ ಬಂದಿತ್ತು. ಇದರ ಜತೆಗೆ ಐಸಿಸಿ ಏಕದಿನ ಕ್ರಿಕೆಟ್​ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. 

ಇನ್ನು ವೆಸ್ಟ್​ ಇಂಡೀಸ್​, ದಕ್ಷಿಣ ಆಫ್ರಿಕಾ ವಿರುದ್ಧದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಗಾಗಿ ಧೋನಿ ಅವರನ್ನ ಆಯ್ಕೆ ಮಾಡಿರಲಿಲ್ಲ. ಹೀಗಾಗಿ ಅವರ ನಿವೃತ್ತಿ ಕನ್ಫರ್ಮ್ ಎಂದು ಕೆಲ ಮಾಧ್ಯಮಗಳಲ್ಲೂ ವರದಿ ಬಿತ್ತರಗೊಂಡಿತ್ತು. ಆದರೆ ಅದು ಅಪ್ಪಟ್ಟ ಸುಳ್ಳು. ಧೋನಿ ನಿವೃತ್ತಿ ಪಡೆದುಕೊಳ್ಳುವ ಯಾವುದೇ ಮಾಹಿತಿ ನಮ್ಮ ಮುಂದೆ ಇಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ಸಹ ತಿಳಿಸಿದ್ರು. 

ಇಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೊಹ್ಲಿ, ಟಿ20 ದೇಶಿಯ ಹಾಗೂ ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ಲೇಯರ್ಸ್​ಗೆ ಇದೀಗ ಅವಕಾಶ ನೀಡಲಾಗುತ್ತಿದ್ದು, ಮುಂದಿನ ಟಿ20 ವಿಶ್ವಕಪ್​​ನಲ್ಲಿ ನಮ್ಮ ತಂಡ ಯಾವ ರೀತಿಯಾಗಿ ಇರಬೇಕು ಎಂಬುದು ಈಗಾಗಲೇ ನಮ್ಮ ಪ್ಲಾನ್​ ಸಿದ್ದಗೊಂಡಿದೆ ಎಂದು ತಿಳಿಸಿದರು.   

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.