ಮುಂಬೈ: ಟಿ-20 ಮಾದರಿಯಲ್ಲಿ ಭಾರತದ ಅಗ್ರಗಣ್ಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಟ್ಟಾರೆ ರನ್ ಗಳಿಕೆ ವಿಚಾರದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು.
ಬುಧವಾರ ವಿಂಡೀಸ್ ವಿರುದ್ಧದ ಅಂತಿಮ ಟಿ-20 ಪಂದ್ಯದೊಂದಿಗೆ ಈ ವರ್ಷ ಭಾರತದ ಟಿ-20 ಪಂದ್ಯಗಳು ಮುಕ್ತಾಯವಾಗಿವೆ. ಭಾರತದ ಪರ ಅತಿ ಹೆಚ್ಚು ಟಿ-20 ರನ್ ಗಳಿಸುವ ವಿಚಾರದಲ್ಲಿ ಕೊಹ್ಲಿ ಹಾಗೂ ರೋಹಿತ್ ಕಳೆದ ಕೆಲ ತಿಂಗಳಿನಿಂದ ಭಾರಿ ಪೈಪೋಟಿಗಿಳಿದಿದ್ದರು. ಪಂದ್ಯದಿಂದ ಪಂದ್ಯಕ್ಕೆ ಏರಿಳಿತ ಕಾಣುತ್ತಿದ್ದ ಭಾರತದ ಈ ಅಗ್ರ ಕ್ರಮಾಂಕದ ದಾಂಡಿಗರು ಸದ್ಯ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ.
-
ICYMI - 6,6,4 - @ImRo45 goes berserk
— BCCI (@BCCI) December 11, 2019 " class="align-text-top noRightClick twitterSection" data="
Brutal! Rohit Sharma showcasing his class with some incredible hitting off Pierre.
Full video here - https://t.co/tVaeZkwKTZ #INDvWI pic.twitter.com/1ilZLEzCgh
">ICYMI - 6,6,4 - @ImRo45 goes berserk
— BCCI (@BCCI) December 11, 2019
Brutal! Rohit Sharma showcasing his class with some incredible hitting off Pierre.
Full video here - https://t.co/tVaeZkwKTZ #INDvWI pic.twitter.com/1ilZLEzCghICYMI - 6,6,4 - @ImRo45 goes berserk
— BCCI (@BCCI) December 11, 2019
Brutal! Rohit Sharma showcasing his class with some incredible hitting off Pierre.
Full video here - https://t.co/tVaeZkwKTZ #INDvWI pic.twitter.com/1ilZLEzCgh
ದ್ವಿತೀಯ ಟಿ-20 ಪಂದ್ಯದಲ್ಲಿ ಒಂದು ರನ್ ಮುಂದಿದ್ದ ಕೊಹ್ಲಿ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾಗಿಂತ ಒಂದು ರನ್ ಕಡಿಮೆ ಗಳಿಸುವ ಮೂಲಕ ಉಪ ನಾಯಕನೊಂದಿಗೆ ಜಂಟಿಯಾಗಿ ಮೊದಲ ಸ್ಥಾನ(2633 ರನ್) ಪಡೆದಿದ್ದಾರೆ.
ಮೂರನೇ ಟಿ-20 ಪಂದ್ಯದಲ್ಲಿ ಸಿಕ್ಸರ್, ಬೌಂಡರಿ ಮೂಲಕ ಅಬ್ಬರಿಸಿದ ರೋಹಿತ್ ಶರ್ಮಾ 71 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರದ ಬಂದ ಕೊಹ್ಲಿ ಸಹ ಮಿಂಚಿನ ಆಟದಿಂದ 70 ರನ್ ಕಲೆಹಾಕಿ ಅಜೇಯರಾಗುಳಿದರು.
-
FIFTY!
— BCCI (@BCCI) December 11, 2019 " class="align-text-top noRightClick twitterSection" data="
Rohit Sharma brings up his 19th T20I half-century with a maximum 👏👏#INDvWI pic.twitter.com/xzr09ZHtL1
">FIFTY!
— BCCI (@BCCI) December 11, 2019
Rohit Sharma brings up his 19th T20I half-century with a maximum 👏👏#INDvWI pic.twitter.com/xzr09ZHtL1FIFTY!
— BCCI (@BCCI) December 11, 2019
Rohit Sharma brings up his 19th T20I half-century with a maximum 👏👏#INDvWI pic.twitter.com/xzr09ZHtL1
ರೋ'ಹಿಟ್',ರಾಹುಲ್,'ವಿರಾಟ್' ಪ್ರದರ್ಶನ: ವಿಂಡೀಸ್ ವಿರುದ್ಧ ಭಾರತಕ್ಕೆ ಸರಣಿ ಗೆಲುವು
ಬುಧವಾರದ ಟಿ-20 ಪಂದ್ಯದೊಂದಿಗೆ ಈ ವರ್ಷದ ಭಾರತದ ಚುಟುಕು ಪಂದ್ಯಗಳು ಕೊನೆಗೊಂಡಿವೆ. ಮುಂದಿನ ವರ್ಷಾರಂಭದಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ನೆರೆಯ ರಾಷ್ಟ್ರ ಶ್ರೀಲಂಕಾ, ಭಾರತದಲ್ಲಿ ಮೂರು ಟಿ-20 ಪಂದ್ಯ ಆಡಲಿದೆ. ಹೀಗಾಗಿ ಅಲ್ಲಿಯ ತನಕ ಈ ಗಳಿಕೆಯಲ್ಲಿ ಯಾವುದೇ ಏರುಪೇರು ಇರುವುದಿಲ್ಲ.