ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇದೀಗ ನಾಳೆಯಿಂದ ಟಿ-20 ಕ್ರಿಕೆಟ್ ಸರಣಿಗಾಗಿ ಸಜ್ಜುಗೊಂಡಿದೆ. ನಾಯಕ ಹಾಗೂ ಉಪನಾಯಕ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪ್ಲೇಯರ್ ಆಗಿದ್ದು, ಇದೀಗ ಆರಂಭಗೊಳ್ಳಲಿರುವ ಸರಣಿಯಲ್ಲಿ 72 ರನ್ಗಳಿಕೆ ಮಾಡಿದ್ರೆ 3 ಸಾವಿರ ರನ್ ಗಳಿಕೆ ಮಾಡಿದಂತಾಗುತ್ತದೆ. ಜತೆಗೆ ಇಷ್ಟೊಂದು ರನ್ಗಳಿಕೆ ಮಾಡುವ ವಿಶ್ವದ ಮೊದಲ ಪ್ಲೇಯರ್ ಆಗಲಿದ್ದಾರೆ. ಇದರ ಜೊತೆಗೆ ಮೂರು ಮಾದರಿ ಕ್ರಿಕೆಟ್ನಲ್ಲಿ 3 ಸಾವಿರ ರನ್ಗಳಿಕೆ ಮಾಡಿದಂತಾಗುತ್ತದೆ.
ಟಿ-20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು..
- ವಿರಾಟ್ ಕೊಹ್ಲಿ: 2,928
- ಮಾರ್ಟಿನ್ ಗಪ್ಟಿಲ್: 2,839
- ರೋಹಿತ್ ಶರ್ಮಾ: 2,773
- ಆ್ಯರೊನ್ ಫಿಂಚ್: 2,346
- ಶೋಯೆಬ್ ಮಲಿಕ್: 2,335 ರನ್
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಅಂತಾರಾಷ್ಟ್ರೀಯ ಟಿ-20 ಪಂದ್ಯ: 40,000 ಟಿಕೆಟ್ ಸೋಲ್ಡ್ಔಟ್!
ಟಿ-20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ 17 ರನ್ಗಳಿಕೆ ಮಾಡಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 12 ಸಾವಿರ ರನ್ ಮಾಡುವ ಮೂರನೇ ಪ್ಲೇಯರ್ ಆಗಲಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (15,440 ರನ್) ಹಾಗೂ ಗ್ರೇಮ್ ಸ್ಮಿತ್ (14,878 ರನ್) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಉಪನಾಯಕ ರೋಹಿತ್ ಶರ್ಮಾ ಕೂಡ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿದ್ದು, 13 ಸಿಕ್ಸರ್ ಸಿಡಿಸಿದ್ರೆ ಮಾರ್ಟಿನ್ ಗಫ್ಟಿಲ್ ದಾಖಲೆ ಬ್ರೇಕ್ ಮಾಡಲಿದ್ದಾರೆ. ಸದ್ಯ ಗಫ್ಟಿಲ್ 139 ಸಿಕ್ಸರ್ ಸಿಡಿಸಿದ್ದಾರೆ. ಜತೆಗೆ 67 ರನ್ಗಳಿಕೆ ಮಾಡಿದ್ರೆ ಗಫ್ಟಿಲ್ ಟಿ-20 ಒಟ್ಟು ರನ್ ಸಾಧನೆಯನ್ನು ಮುರಿಯಲಿದ್ದಾರೆ.