ETV Bharat / sports

'ಡೈಪರ್​' ಪೋರನನ್ನು ಟೀಮ್​ ಇಂಡಿಯಾಗೆ ಸೇರಿಸಿಕೊಳ್ಳಿ ಎಂದ ಕೆಪಿ... ಕೊಹ್ಲಿ ರಿಯಾಕ್ಷನ್​ ಹೇಗಿತ್ತು?

ಡೈಪರ್​ ತೊಟ್ಟು ಮನೆಯಲ್ಲಿ ಪ್ಲಾಸ್ಟಿಕ್​ ಬಾಲ್​ನಲ್ಲಿ ಕವರ್​ ಡ್ರೈವ್​, ಸ್ಟ್ರೈಟ್​ ಡ್ರೈವ್​ ತುಂಬಾ ಸುಲಭವಾಗಿ ಹೊಡೆದು ಟ್ವಿಟರ್​ನಲ್ಲಿ ಭಾರಿ ಹವಾ ಸೃಷ್ಠಿಸಿದ್ದ ಬಾಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.

Virat Kohli responds to Kevin Pietersen
Virat Kohli responds to Kevin Pietersen
author img

By

Published : Dec 15, 2019, 1:04 PM IST

ಮುಂಬೈ: ಕೆಲವು ದಿನಗಳ ಹಿಂದೆ ಡೈಪರ್​ ಹಾಕಿಕೊಂಡು ಬ್ಯಾಟಿಂಗ್​ ಮಾಡಿ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡಿದ್ದ ಪುಟ್ಟಬಾಲಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿದ್ದ 40 ಸೆಕೆಂಡ್ ವಿಡಿಯೋದಲ್ಲಿ ಈ ಬಾಲಕ ಡೈಪರ್​ ತೊಟ್ಟು ಮನೆಯಲ್ಲಿ ಪ್ಲಾಸ್ಟಿಕ್​ ಬಾಲ್​ನಲ್ಲಿ ಕವರ್​ ಡ್ರೈವ್​, ಸ್ಟ್ರೈಟ್​ ಡ್ರೈವ್​ ತುಂಬಾ ಸುಲಭವಾಗಿ ಹೊಡೆದು ಟ್ವಿಟರ್​ನಲ್ಲಿ ಭಾರಿ ಹವಾ ಸೃಷ್ಠಿಸಿದ್ದ.

Virat Kohli-KP
ವಿರಾಟ್​ ಕೊಹ್ಲಿ ಪ್ರತಿಕ್ರಿಯೆ

ಇದೀಗ ಈ ವಿಡಿಯೋವನ್ನು ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡು ವಿರಾಟ್​ ಕೊಹ್ಲಿಗೆ ಟ್ಯಾಗ್​ ಮಾಡಿ, ನಿಮ್ಮ ತಂಡಕ್ಕೆ ಸೇರಿಸಿಕೊಳ್ತೀರಾ?ಎಂದಿ ಬರೆದುಕೊಂಡಿದ್ದರು.

ಇದಕ್ಕೆ ವಿರಾಟ್​ ಕೊಹ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದು, ಆ ಬಾಲಕ ಎಲ್ಲಿಯವನು, ಅವನು ನಿಜ ಎಂಬುದು ನಂಬಲಾಗುತ್ತಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾದ ಲೆಜೆಂಡ್​ ಜಾಕ್​ ಕಾಲೀಸ್​ ಕೂಡ ಅದ್ಭುತ ಪ್ರತಿಭೆ, ಇನ್ನು ಡೈಪರ್​ ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಇಂತಹ ಕೌಶಲ್ಯವಿದೆ ಎಂದು ಆ ಬಾಲಕನ ಪ್ರತಿಭೆಯನ್ನು ಹೊಗಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.