ಬ್ರಿಸ್ಬೇನ್: ಬಾರ್ಡರ್-ಗಾವಸ್ಕರ್ ಸರಣಿಯ 4ನೇ ಟೆಸ್ಟ್ನಲ್ಲಿ ಭಾರತ ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಅರ್ಧಶತಕ ಸಿಡಿಸಿದ ವಾಷಿಂಗ್ಟನ್ ಸುಂದರ್ ಆಟವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
ಆಸೀಸ್ ಭದ್ರಕೋಟೆ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದ ವೇಳೆ ಭಾರತ ತಂಡ 186 ರನ್ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಬಂದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ 123 ರನ್ಗಳ ಜೊತೆಯಾಟ ನಡೆಸಿದರು.
ಶಾರ್ದುಲ್ 115 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 67 ರನ್ ಸಿಡಿಸಿದರೆ, ವಾಷಿಂಗ್ಟನ್ ಸುಂದರ್ 144 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 62 ರನ್ಗಳಿಸಿದರು.
-
Outstanding application and belief by @Sundarwashi5 and @imShard. This is what test cricket is all about. Washy top composure on debut and tula parat maanla re Thakur! 👏👌
— Virat Kohli (@imVkohli) January 17, 2021 " class="align-text-top noRightClick twitterSection" data="
">Outstanding application and belief by @Sundarwashi5 and @imShard. This is what test cricket is all about. Washy top composure on debut and tula parat maanla re Thakur! 👏👌
— Virat Kohli (@imVkohli) January 17, 2021Outstanding application and belief by @Sundarwashi5 and @imShard. This is what test cricket is all about. Washy top composure on debut and tula parat maanla re Thakur! 👏👌
— Virat Kohli (@imVkohli) January 17, 2021
ಈ ಇಬ್ಬರ ಆಟವನ್ನು ಮೆಚ್ಚಿಕೊಂಡಿರುವ ಕೊಹ್ಲಿ, "ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಅತ್ಯುತ್ತಮ ಪ್ರದರ್ಶನ ಮತ್ತು ಆತ್ಮವಿಶ್ವಾಸದ ಆಟ ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ಎಂದರೆ ಇದೇ. ಪದಾರ್ಪಣೆ ಪಂದ್ಯದಲ್ಲೇ ವಾಷಿಂಗ್ಟನ್ ಉತ್ತಮ ಸಂಯೋಜನೆ ತೋರಿಸಿದ್ದೀರಿ. ನಿಮ್ಮ ಆಟವನ್ನು ನಾನು ಮೆಚ್ಚಿದ್ದೇನೆ ಠಾಕೂರ್" ಎಂದು ಕೊಹ್ಲಿ ಟ್ವಿಟರ್ ಮೂಲಕ ಶಹಬ್ಬಾಸ್ಗಿರಿ ನೀಡಿದ್ದಾರೆ.
3ನೇ ದಿನದಂತ್ಯಕ್ಕೆ ಭಾರತ ತಂಡ 330ಕ್ಕೆ ಆಲೌಟಾದರೆ, ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿ ಒಟ್ಟಾರೆ 54 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲಿ ಸುಂದರ್ ದಾಖಲೆ: 3ನೇ ದಿನದಂತ್ಯಕ್ಕೆ ಆಸೀಸ್ಗೆ 54 ರನ್ ಮುನ್ನಡೆ