ETV Bharat / sports

ಬೆಳಕಿನ ಹಬ್ಬವನ್ನು ಪಟಾಕಿ ರಹಿತವಾಗಿ ಆಚರಿಸಿ, ಪರಿಸರವನ್ನು ಉಳಿಸಿ: ಕೊಹ್ಲಿ ಮನವಿ

ಕೊಹ್ಲಿಯಲ್ಲದೆ ಮಾಜಿ ಕ್ರಿಕೆಟಿಗರಾದ ವಿವಿಎಸ್​ ಲಕ್ಷ್ಮಣ್​, ವಿರೇಂದ್ರ ಸೆಹ್ವಾಗ್​ ಹಾಗೂ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್​ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
author img

By

Published : Nov 14, 2020, 5:04 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಶುಕ್ರವಾರ ಭಾರತೀಯರಿಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದು, ಬೆಳಕಿನ ಹಬ್ಬವನ್ನು ಪಟಾಕಿ ರಹಿತವಾಗಿ ಆಚರಿಸಲು ಮನವಿ ಮಾಡಿದ್ದಾರೆ.

ಪ್ರಸ್ತುತ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಸಿಡ್ನಿಯ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಕೊಹ್ಲಿ 3 ಏಕದಿನ ಮತ್ತು 3 ಟಿ-20 ಪಂದ್ಯಗಳನ್ನಾಡಲಿದ್ದು, ಟೆಸ್ಟ್​ ಸರಣಿಯ ಮೊದಲ ಪಂದ್ಯದ ನಂತರ ತವರಿಗೆ ವಾಪಸಾಗಲಿದ್ದಾರೆ. ಪತ್ನಿ ಅನುಷ್ಕಾ ಜನವರಿಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದ್ದು, ಕೊಹ್ಲಿ ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿದ್ದಾರೆ.

"ನನ್ನ ಕಡೆಯಿಂದ ನಿಮಗೂ ಮತ್ತು ನಿಮ್ಮ ಕುಟಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮಗೆ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೀಡಲಿ. ಪರಿಸರವನ್ನು ರಕ್ಷಿಸಲು ಪಟಾಕಿ ಸಿಡಿಸಬೇಡಿ ಮತ್ತು ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಸರಳವಾಗಿ ದೀಪ ಹಚ್ಚುವ ಮೂಲಕ ಮತ್ತು ಸಿಹಿ ಹಂಚಿ ಸಂಭ್ರಮಿಸಿ" ಎಂದು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮೂಲಕ ಶುಭ ಕೋರಿದ್ದಾರೆ.

ಕೊಹ್ಲಿಯಲ್ಲದೆ ಮಾಜಿ ಕ್ರಿಕೆಟಿಗರಾದ ವಿವಿಎಸ್​ ಲಕ್ಷ್ಮಣ್​, ವಿರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್​ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

  • Wishing all of you Happy Deepavali 🪔 🪔 May the Divine Light of Diwali Spread into your Life Peace, Prosperity, Happiness and Good Health. pic.twitter.com/hCGca7bU3J

    — VVS Laxman (@VVSLaxman281) November 14, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.