ಮುಂಬೈ: ವಿಶ್ವಕಪ್ ಬೆನ್ನಲ್ಲೇ ಭಾರತ ತಂಡ ವಿಂಡೀಸ್ ಪ್ರವಾಸ ಕೈಗೊಳ್ಳುತ್ತಿದ್ದು, ಏಕದಿನ ಸರಣಿ ಹಾಗೂ ಟಿ20 ಸರಣಿಯಿಂದ ವಿರಾಟ್ ಹಾಗೂ ಬುಮ್ರಾ ಹೊರಗುಳಿಯಲಿದ್ದಾರೆ.
ಏಕದಿನ ಬ್ಯಾಟಿಂಗ್-ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಆಗಿರುವ ವಿರಾಟ್ ಹಾಗೂ ಬುಮ್ರಾ ಆಗಸ್ಟ್ 3 ರಿಂದ ವಿಂಡೀಸ್ ವಿರುದ್ಧ ನಡೆಯುವ ಸೀಮಿತ ಓವರ್ಗಳ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಆಗಸ್ಟ್ 22ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು ಈ ವೇಳೆ ಕೊಹ್ಲಿ ಮತ್ತು ಬುಮ್ರಾ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಸೀಮಿತ ಓವರ್ಗಳಿಗೆ ರೋಹಿತ್ ಶರ್ಮಾ ನಾಯಕತ್ವ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇನ್ನು ಐಪಿಎಲ್ ಹಾಗೂ ವಿಶ್ವಕಪ್ ತಂಡದಲ್ಲಿ ಪ್ರಮುಖ ಬೌಲರ್ ಆಗಿರುವ ಬುಮ್ರಾಗೂ ಕೂಡ ವಿಶ್ರಾಂತಿ ನೀಡಲಾಗಿದ್ದು, ಬುಮ್ರಾರ ಬದಲು ಹೊಸಬರಿಗೆ ಅವಕಾಶ ನೀಡುವ ಸಾದ್ಯತೆ ಇದೆ.