ETV Bharat / sports

ಫುಟ್​ಬಾಲ್​ನಲ್ಲಿ ರೋನಾಲ್ಡೊ ಹೇಗೋ... ಹಾಗೇ ಕ್ರಿಕೆಟ್​ಗೆ ವಿರಾಟ್​ ಕೊಹ್ಲಿ ಎಂದ ಲೆಜೆಂಡ್​ ಕ್ರಿಕೆಟರ್​ - ಕೊಹ್ಲಿಯನ್ನು ರೊನಾಲ್ಡೊಗೆ ಹೋಲಿಸಿದ ಲಾರಾ

ವಿರಾಟ್​ ಕೊಹ್ಲಿ ಫಿಟ್​ನೆಸ್​, ಅವರ ಮಾನಸಿಕ ಸದೃಢತೆ ನಂಬಲಸಾಧ್ಯವಾದದ್ದು. ಅವರ ಬ್ಯಾಟಿಂಗ್​ ಸ್ಕಿಲ್​ ಅತ್ಯದ್ಭುತ. ನೀವೂ ಕ್ರಿಕೆಟ್​ನ ಯಾವುದೇ ಯುಗದಲ್ಲಾದರೂ ಕೊಹ್ಲಿಯನ್ನು ಕಡೆಗಣಿಸಲಾಗುವುದಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ 50ರ ಸರಾಸರಿ ಹೊಂದಿದ್ದಾನೆಂದರೆ ಅವನಲ್ಲಿ ಏನೋ ವಿಶೇಷ ಶಕ್ತಿ ಇದೆ ಎಂದರ್ಥ ಎಂದು ಲಾರಾ ಮುಕ್ತಕಂಠದಿಂದ ಭಾರತ ತಂಡದ ನಾಯಕನನ್ನು ಬಣ್ಣಿಸಿದ್ದಾರೆ.

Virat Kohli- brian lara
Virat Kohli- brian lara
author img

By

Published : Dec 16, 2019, 7:15 PM IST

ಮುಂಬೈ: ಕ್ರಿಕೆಟ್​ ಜಗತ್ತು ಕಂಡ ಶ್ರೇಷ್ಠ ಆಟಗಾರರ ಸಾಲಿನಲ್ಲಿ ನಿಲ್ಲುವ ವೆಸ್ಟ್​ ಇಂಡೀಸ್​ ತಂಡದ ಮಾಜಿ ನಾಯಕ ಬ್ರಿಯಾನ್​ ಲಾರಾ ವಿರಾಟ್​​ ಕೊಹ್ಲಿಯನ್ನು ಫುಟ್ಬಾಲ್​ ದಿಗ್ಗಜ ಕ್ರಿಶ್ಚಿಯಾನೋ ರೋನಾಲ್ಡೊಗೆ ಹೋಲಿಕೆ ಮಾಡಿದ್ದಾರೆ.

ತಮ್ಮ 400 ರನ್​ಗಳ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ, ರಾಹುಲ್​, ಕೊಹ್ಲಿ ಅಥವಾ ರೋಹಿತ್​ರಿಂದ ಸಾಧ್ಯವಾಗಬಹುದು. ಆದ್ರೆ ಆಟದ ಬದ್ಧತೆಯಲ್ಲಿ ವಿರಾಟ್​ ಕೊಹ್ಲಿ ಉತ್ತಮರಾಗಿದ್ದಾರೆ. ಅವರು ಕೆ ಎಲ್​ ರಾಹುಲ್​ ಹಾಗೂ ರೋಹಿತ್​ ಶರ್ಮಾಗಿಂತ ಅತ್ಯುತ್ತಮ ಎಂದೂ ಹೇಳುತ್ತಿಲ್ಲ. ಆಟದ ಬದ್ಧತೆಯಲ್ಲಿ ನೋಡುವುದಾದರೆ ಫುಟ್ಬಾಲ್​ ಲೆಜೆಂಡ್​ ಕ್ರಿಶ್ಚಿಯಾನೊ ರೋನಾಲ್ಡೊ ಅವರಿಗೆ ಸರಿಸಮನಾಗಿ ವಿರಾಟ್​ ಕೊಹ್ಲಿ ನಿಲ್ಲುತ್ತಾರೆ ಎಂದು ಲಾರಾ ತಿಳಿಸಿದ್ದಾರೆ.​

Virat Kohli- brian lara
ಬ್ರಿಯಾನ್​ ಲಾರಾ

ವಿರಾಟ್​ ಕೊಹ್ಲಿ ಫಿಟ್​ನೆಸ್​, ಅವರ ಮಾನಸಿಕ ಸದೃಢತೆ ನಂಬಲಸಾಧ್ಯವಾದದ್ದು. ಅವರ ಬ್ಯಾಟಿಂಗ್​ ಸ್ಕಿಲ್​ ಅತ್ಯದ್ಭುತ. ನೀವೂ ಕ್ರಿಕೆಟ್​ನ ಯಾವುದೇ ಯುಗದಲ್ಲಾದರೂ ಕೊಹ್ಲಿಯನ್ನು ಕಡೆಗಣಿಸಲಾಗುವುದಿಲ್ಲ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ 50ರ ಸರಾಸರಿ ಹೊಂದಿದ್ದಾನೆಂದರೆ ಅವನಲ್ಲಿ ಏನೋ ವಿಶೇಷ ಶಕ್ತಿ ಇದೆ ಎಂದರ್ಥ ಎಂದು ಮುಕ್ತಕಂಠದಿಂದ ಭಾರತ ತಂಡದ ನಾಯಕನನ್ನು ಶ್ಲಾಘಿಸಿದ್ದಾರೆ.

ಲಾರಾ ಹೇಳಿದಂತೆಯೇ ಕೊಹ್ಲಿ ಕೂಡ ರೋನಾಲ್ಡೊ ಫಾಲೋವರ್​, ಅವರಂತೆಯೇ ಸ್ವಂತ ಟೆಕ್ನಿಕ್​ ಕಂಡುಕೊಂಡಿದ್ದಾರೆ. ಅವರಂತೆಯೇ ಫಿಟ್​ನೆಸ್ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ಬ್ರಿಯಾನ್​ ಲಾರಾ ಹೇಳಿದಂತೆ ಕೊಹ್ಲಿ ನಿಜಕ್ಕೂ ಕ್ರಿಕೆಟ್​ನ ರೋನಾಲ್ಡೊ ಎಂದರೆ ತಪ್ಪಾಗಲಾರದು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.