ETV Bharat / sports

'ವಿರಾಟ್​ ಕೊಹ್ಲಿ ವಿಶ್ವದ ಪವರ್​ಫುಲ್​ ವ್ಯಕ್ತಿ' ಎಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ - India's tour of Australia

2005-07ರವರೆಗೆ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದ ಗ್ರೇಗ್ ಚಾಪೆಲ್ ಕೂಡ ಕೊಹ್ಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಪ್ರಸ್ತುತ ಖಂಡಿತವಾಗಿಯೂ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ವಿಶ್ವ ಕ್ರಿಕೆಟ್​ನ ಅತ್ಯಂತ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ..

ವಿರಾಟ್​ ಕೊಹ್ಲಿ ವಿಶ್ವದ ಪವರ್​ಫುಲ್​ ವ್ಯಕ್ತಿ

author img

By

Published : Nov 15, 2020, 4:11 PM IST

ಮೆಲ್ಬೋರ್ನ್ ​: ವಿರಾಟ್​ ಕೊಹ್ಲಿ 'ವಿಶ್ವಕ್ರಿಕೆಟ್​ನ ಶಕ್ತಿಯುತ ವ್ಯಕ್ತಿ', ಅವರು ಒಬ್ಬ ಕ್ರಿಕೆಟರ್ ಮತ್ತು ನಾಯಕ ಎರಡು ಜವಾಬ್ದಾರಿಗಳನ್ನು ಆಕ್ರಮಣಕಾರಿಯಾಗಿ ನಿಭಾಯಿಸಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್​ ಅಭಿಪ್ರಾಯಪಟ್ಟಿದ್ದಾರೆ. ಪ್ರಸಿದ್ಧ ಭಾರತ ತಂಡದ ನಾಯಕ ಪ್ರತಿ ವರ್ಷ ತನ್ನ ಬೆಳವಣಿಗೆಯ ಜೊತೆ ಜೊತೆಗೆ ಹಲವು ಅದ್ಭುತ ದಾಖಲೆಗಳನ್ನು ಬ್ರೇಕ್​ ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ.

ಮಾರ್ಕ್​ ಟೇಲರ್​
ಮಾರ್ಕ್​ ಟೇಲರ್​

'ನನ್ನ ಪ್ರಕಾರ ಅವರು(ಕೊಹ್ಲಿ) ವಿಶ್ವ ಕ್ರಿಕೆಟ್​ನ ಪವರ್​ಫುಲ್​ ವ್ಯಕ್ತಿ. ಆದರೆ, ಆಕ್ರಮಣಕಾರಿ ಕ್ರಿಕೆಟಿಗ ಮತ್ತು ನಾಯಕನಾಗಿ ಉತ್ತಮ ಹಾದಿಯಲ್ಲಿ ನಡೆಯಲು ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದು ಟೇಲರ್‌ ತಿಳಿಸಿದ್ದಾರೆ.

ಕೊಹ್ಲಿ ತಮ್ಮ ಜವಾಬ್ದಾರಿಯನ್ನು ಬಹಳ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ಮಾತನಾಡುವಾಗ ಅವರಲ್ಲಿ ಆ ಗೌರವವನ್ನು ಕಂಡಿದ್ದೇನೆ ಎಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಹೇಳಿದ್ದಾರೆ.

2005-07ರವರೆಗೆ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದ ಗ್ರೇಗ್ ಚಾಪೆಲ್ ಕೂಡ ಕೊಹ್ಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಪ್ರಸ್ತುತ ಖಂಡಿತವಾಗಿಯೂ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಮತ್ತು ವಿಶ್ವ ಕ್ರಿಕೆಟ್​ನ ಅತ್ಯಂತ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ ಎಂದು ಚಾಪೆಲ್ ತಿಳಿಸಿದ್ದಾರೆ.

ಅವರು ದೃಢವಾದ ಅಭಿಪ್ರಾಯಗಳನ್ನು ಹೊಂದಿದ್ದು, ಅದನ್ನು ಮಾತನಾಡಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ತಮ್ಮನ್ನು ತಾವೂ ತೊಡಗಿಸಿಕೊಳ್ಳುವುದನ್ನ ಅವರು ತುಂಬಾ ಸಂತೋಷ ಪಡುತ್ತಾರೆ ಎಂದು ಚಾಪೆಲ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.