ಹೈದರಾಬಾದ್: 2020ರ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಆಟಗಾರರನ್ನ ಖರೀದಿಸಿದೆ.
ಆರ್ಸಿಬಿ ತಂಡ ಆಯ್ಕೆ ಮಾಡಿರುವ ಆಟಗಾರರ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ಆಟಗಾರರ ಆಯ್ಕೆ ಮತ್ತು ಸತೋಲನವಾದ ತಂಡ ರೆಡಿ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೆವು. ನಮ್ಮ ತಂಡ ಆಯ್ಕೆ ಮಾಡಿಕೊಂಡಿರುವ ಆಟಗಾರರ ಬಗ್ಗೆ ನಿಜಕ್ಕೂ ಸಂತೋಷವಾಗಿದ್ದು, ಟೂರ್ನಿಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
-
Challengers! Here's your Bold Squad for #IPL2020.
— Royal Challengers (@RCBTweets) December 20, 2019 ." class="align-text-top noRightClick twitterSection" data="
Do you think we have it in us to go the distance this season? #PlayBold pic.twitter.com/AFL05YlCDy
.">Challengers! Here's your Bold Squad for #IPL2020.
— Royal Challengers (@RCBTweets) December 20, 2019
Do you think we have it in us to go the distance this season? #PlayBold pic.twitter.com/AFL05YlCDy
.Challengers! Here's your Bold Squad for #IPL2020.
— Royal Challengers (@RCBTweets) December 20, 2019
Do you think we have it in us to go the distance this season? #PlayBold pic.twitter.com/AFL05YlCDy
ಪ್ರತಿಯೊಬ್ಬರ ವೈಯಕ್ತಿಕ ಕೊಡುಗೆಯಿಂದ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ಆಟಗಾರರು ಉತ್ತಮವಾದ ಪ್ರದರ್ಶನ ನೀಡಬೇಕಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ತಂಡ ಆರನ್ ಫಿಂಚ್, ಕ್ರಿಸ್ ಮೋರಿಸ್, ಡೇಲ್ ಸ್ಟೈನ್, ಕೇನ್ ರಿಚರ್ಡ್ಸನ್, ಜೋಶುವ ಫಿಲಿಪ್ಪೆ, ಇಸುರು ಉದಾನ, ಪವನ್ ದೇಶಪಾಂಡೆ, ಶಹಬಾಜ್ ಅಹಮದ್ ಅವರನ್ನ ಖರೀದಿಸಿತ್ತು.