ಬೆಂಗಳೂರು: 12 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ದಿನಗಣನೆ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.
ಐಪಿಲ್ನಲ್ಲಿ ಹಲವು ದಾಖಲೆಗಳನ್ನ ಬರೆದಿರುವ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲೇ ಎರಡು ದಾಖಲೆಗಳನ್ನ ಬರೆಯಲು ಸಜ್ಜಾಗಿದ್ದಾರೆ. ಐಪಿಎಲ್ನ 11 ಆವೃತ್ತಿಗಳಲ್ಲಿ ಒಟ್ಟಾರೆ 4,948 ರನ್ ಗಳಿಸಿರುವ ವಿರಾಟ್ 37 ರನ್ ಗಳಿಸಿದ್ರೆ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಸದ್ಯ ಸಿಎಸ್ಕೆ ತಂಡದ ಆಟಗಾರ ಸುರೇಶ್ ರೈನಾ 4,985 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ಇನ್ನು ವಿರಾಟ್ ಏನಾದ್ರು ಚೆನ್ನೈ ವಿರುದ್ಧ 50 ರನ್ ಗಳಿಸಿದ್ರೆ ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ 39 ಅರ್ಧಶತಕ ಗಳಿಸಿದ್ದು, ಕೊಹ್ಲಿ 38 ಅರ್ಧಶತಕ ಗಳಿಸಿದ್ದಾರೆ.
ಟೆಸ್ಟ್ ಆಗ್ಲಿ, ಒಂಡೆ ಆಗ್ಲಿ, ಚುಟುಕು ಪಂದ್ಯವಾಗ್ಲಿ ವಿರಾಟ್ ಎಲ್ಲ ಮಾದರಿಯ ಆಟಗಳಿಗಳಿಗೆ ಹೊಂದಿಕೊಂಡು ಆಟವಾಡುತ್ತಾರೆ. ಹೀಗಾಗಿ ಎಲ್ಲ ಮಾದರಿಗಳಲ್ಲೂ ಅನೇಕ ದಾಖಲೆಗಳನ್ನ ಬರೆದಿರುವ ವಿರಾಟ್, ಮೊದಲ ಪಂದ್ಯದಲ್ಲಿ ಈ ಎರಡು ದಾಖಲೆಗಳನ್ನ ನಿರ್ಮಾಣ ಮಾಡ್ತಾರಾ ಕಾದು ನೋಡಬೇಕು.