ETV Bharat / sports

ನಾಯಕತ್ವದಲ್ಲಿ ಧೋನಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ.. - ವಿರಾಟ್ ಕೊಹ್ಲಿ ಲೇಟೆಸ್ಟ್ ನ್ಯೂಸ್​

ಧೋನಿ ಒಟ್ಟಾರೆ 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 27 ಜಯ ಹಾಗೂ 18 ಸೋಲು ಕಂಡಿದ್ದಾರೆ. ಆದರೆ, ತವರಿನಲ್ಲಿ 30 ಪಂದ್ಯ ಮುನ್ನಡೆಸಿದ್ದು, 21ರಲ್ಲಿ ಗೆಲುವು ಸಾಧಿಸಿ ಕೇವಲ 3ರಲ್ಲಿ ಮಾತ್ರ ಸೋಲು ಕಂಡಿದ್ದಾರೆ. ಉಳಿದ ಆರು ಪಂದ್ಯಗಳು ಡ್ರಾನಲ್ಲಿ ಆಂತ್ಯವಾಗಿವೆ..

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
author img

By

Published : Feb 16, 2021, 8:38 PM IST

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 317 ರನ್​ಗಳ ಬೃಹತ್ ಜಯ ಸಾಧಿಸುವ ಮೂಲಕ ಟೆಸ್ಟ್​ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.

ಈ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೆಸ್ಟ್​ ಗೆಲ್ಲುವ ಮೂಲಕ ತವರಿನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ಎಂಬ ಶ್ರೇಯವನ್ನು ಎಂಎಸ್ ಧೋನಿ ಜೊತೆ ಹಂಚಿಕೊಂಡಿದ್ದಾರೆ.

ಈಗಾಗಲೇ ಭಾರತದ ಪರ ನಾಯಕನಾಗಿ 58 ಪಂದ್ಯಗಳನಲ್ಲಿ ಮುನ್ನಡೆಸಿರುವ ಕೊಹ್ಲಿ ಅದರಲ್ಲಿ 34 ಗೆಲುವು ಸಾಧಿಸಿ ಭಾರತದ ಯಶಸ್ವಿ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದೀಗ ತವರಿನಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಧೋನಿ ದಾಖಲೆಯನ್ನ ಕೂಡ ಸರಿಗಟ್ಟಿದ್ದಾರೆ.

ಧೋನಿ ಒಟ್ಟಾರೆ 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 27 ಜಯ ಹಾಗೂ 18 ಸೋಲು ಕಂಡಿದ್ದಾರೆ. ಆದರೆ, ತವರಿನಲ್ಲಿ 30 ಪಂದ್ಯ ಮುನ್ನಡೆಸಿದ್ದು, 21ರಲ್ಲಿ ಗೆಲುವು ಸಾಧಿಸಿ ಕೇವಲ 3ರಲ್ಲಿ ಮಾತ್ರ ಸೋಲು ಕಂಡಿದ್ದಾರೆ. ಉಳಿದ ಆರು ಪಂದ್ಯಗಳು ಡ್ರಾನಲ್ಲಿ ಆಂತ್ಯವಾಗಿವೆ.

ವಿರಾಟ್ ಕೊಹ್ಲಿ ಭಾರತದಲ್ಲಿ 28 ಪಂದ್ಯಗಳಲ್ಲಿ ನಾಯಕನಾಗಿದ್ದು, ಇದರಲ್ಲಿ ಭಾರತ ತಂಡ 21 ಪಂದ್ಯ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ಐದು ಪಂದ್ಯಗಳು ಡ್ರಾ ಆಗಿವೆ.

ಇದನ್ನು ಓದಿ: ಟೆಸ್ಟ್​ ಗೆಲ್ಲುವುದಕ್ಕೆ ನಾವು ತೋರಿದ ಉತ್ಸಾಹ, ಪರಿಶ್ರಮ ಕಾರಣವೇ ಹೊರತು, ಟಾಸ್​ ಅಲ್ಲ: ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.