ಅಹ್ಮದಾಬಾದ್: ರವಿಚಂದ್ರನ್ ಅಶ್ವಿನ್ ಗುರುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ 400 ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಸಾಧನೆಯನ್ನು ಗುಣಗಾನ ಮಾಡಿರುವ ಟೀಂ ಇಂಡಿಯಾ ನಾಯಕ ಕೊಹ್ಲಿ, ಅಶ್ವಿನ್ ಆಧುನಿಕ ಕಾಲದ ದಂತಕಥೆ ಎಂದು ಕರೆದಿದ್ದಾರೆ.
ಅಶ್ವಿನ್ 3ನೇ ಪಂದ್ಯದ 2ನೇ ದಿನ ಜೋಫ್ರಾ ಆರ್ಚರ್ ವಿಕೆಟ್ ಪಡೆಯುವ ಮೂಲಕ ಈ ವಿಶೇಷ ಮೈಲುಗಲ್ಲು ಸ್ಥಾಪಿಸಿದರು. 34 ವರ್ಷದ ಆಫ್ ಸ್ಪಿನ್ನರ್, ಟೆಸ್ಟ್ ಕ್ರಿಕೆಟ್ನ 77ನೇ ಪಂದ್ಯದಲ್ಲಿ 400 ವಿಕೆಟ್ ಪಡೆದರೆ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 72 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
-
.@ashwinravi99 is a modern day Legend 🙌🏻 : @imVkohli 🔊#TeamIndia #INDvENG #PinkBallTest @Paytm pic.twitter.com/AaQqI3QcUa
— BCCI (@BCCI) February 25, 2021 " class="align-text-top noRightClick twitterSection" data="
">.@ashwinravi99 is a modern day Legend 🙌🏻 : @imVkohli 🔊#TeamIndia #INDvENG #PinkBallTest @Paytm pic.twitter.com/AaQqI3QcUa
— BCCI (@BCCI) February 25, 2021.@ashwinravi99 is a modern day Legend 🙌🏻 : @imVkohli 🔊#TeamIndia #INDvENG #PinkBallTest @Paytm pic.twitter.com/AaQqI3QcUa
— BCCI (@BCCI) February 25, 2021
ಅಶ್ವಿನ್ ಭಾರತಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಇದನ್ನು ನಾವೆಲ್ಲರು ಗುರುತಿಸಬೇಕಿದೆ ಮತ್ತು ಗೌರವಿಸಬೇಕಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದಿರುವುದು ಅದ್ಭುತ ಸಾಧನೆ. ಅವರು ಇನ್ನು ಕೆಲವು ವರ್ಷಗಳ ಕಾಲ ಭಾರತ ತಂಡದ ಪರ ಸಾಕಷ್ಟು ಪಂದ್ಯಗಳನ್ನು ಆಡಲಿದ್ದಾರೆ. ನಾನು ಅವರನ್ನು ಮಾಡರ್ನ್ ಡೇ ಲೆಜೆಂಡ್ ಎಂದು ಕರೆಯುತ್ತೇನೆ. ಅವರನ್ನು ನಮ್ಮ ತಂಡದಲ್ಲಿ ಹೊಂದಿರುವುದಕ್ಕೆ ನಾನು ಸಂತೋಷ ಪಡುತ್ತೇನೆ ಎಂದು ಕೊಹ್ಲಿ ಪಂದ್ಯದ ನಂತರ ಹೇಳಿದ್ದಾರೆ.
ಅಶ್ವಿನ್ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದರು. ಭಾರತ ತಂಡ ಇಂಗ್ಲೆಂಡ್ ತಂಡವನ್ನು 10 ವಿಕೆಟ್ಗಳಿಂದ ಮಣಿಸಿ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನು ಓದಿ:ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್: ಈ ದಾಖಲೆ ಬರೆದ ಮೊದಲ ಪ್ಲೇಯರ್ ಅಕ್ಸರ್ ಪಟೇಲ್!