ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್ಗಳಿಂದ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಾಯಕನಾಗಿ ತವರಿನಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆಗೆ ಪಾತ್ರಾಗಿದ್ದಾರೆ.
ಕೊಹ್ಲಿ ಮಾಜಿ ನಾಯಕ ಎಂ.ಎಸ್.ಧೋನಿಯನ್ನು ಹಿಂದಿಕ್ಕುವ ಮೂಲಕ ಭಾರತ ತಂಡದ ಯಶಸ್ವಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಧೋನಿ ತವರಿನಲ್ಲಿ 30 ಪಂದ್ಯಗಳನ್ನು ಮುನ್ನಡೆಸಿ 21 ಜಯ ಕಂಡಿದ್ದರು. ಇದೀಗ ಕೊಹ್ಲಿ 29 ಪಂದ್ಯಗಳಲ್ಲಿ 22 ಜಯ ಸಾಧಿಸಿ ಭಾರತದ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 59 ಪಂದ್ಯಗಳಲ್ಲಿ 35 ಜಯ,14 ಸೋಲು ಹಾಗೂ 10 ಡ್ರಾ ಸಾಧಿಸಿದೆ. ಧೋನಿ 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 27 ಜಯ ಹಾಗೂ 18 ಸೋಲು ಕಂಡಿದ್ದಾರೆ.
3ನೇ ಸ್ಥಾನದಲ್ಲಿರುವ ಸೌರವ್ ಗಂಗೂಲಿ 49 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದು, 21 ಜಯ, 13 ಸೋಲು ಕಂಡಿದ್ದರೆ, 15 ಡ್ರಾನಲ್ಲಿ ಅಂತ್ಯಗೊಂಡಿದೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು 109 ಪಂದ್ಯಗಳಲ್ಲಿ ನಾಯಕರಾಗಿದ್ದು, 53 ಗೆಲುವು, 26 ಸೋಲು ಕಂಡಿದ್ದರೆ, 27 ಪಂದ್ಯಗಳು ಡ್ರಾ ಆಗಿವೆ.
ಇದನ್ನು ಓದಿ:ಡೇ ಅಂಡ್ ನೈಟ್ ಟೆಸ್ಟ್: ಭಾರತಕ್ಕೆ 10 ವಿಕೆಟ್ಗಳ ಭರ್ಜರಿ ಜಯ