ETV Bharat / sports

11 ವರ್ಷಗಳ ನಂತರ ಮತ್ತೊಂದು ವಿಶ್ವಕಪ್​, ಮತ್ತೊಂದು ಸೆಮಿಫೈನಲ್​ನಲ್ಲಿ ಕೊಹ್ಲಿ-ವಿಲಿಯಮ್ಸನ್​ ಮುಖಾಮುಖಿ

11 ವರ್ಷಗಳ ನಂತರ ಭಾರತ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು ಮತ್ತೊಂದು ವಿಶ್ವಕಪ್​ ಸೆಮಿಫೈನಲ್​ ಮುಖಾಮುಖಾಯಾಗುತ್ತಿದ್ದು ಅಂದು ತಂಡವನ್ನು ಮುನ್ನಡೆಸಿದ್ದರು.

Virat Kohli
author img

By

Published : Jul 7, 2019, 5:56 PM IST

ಲಂಡನ್​: 2008ರ ಅಂಡರ್​ 19 ವಿಶ್ವಕಪ್​ನಲ್ಲಿ ಭಾರತ ತಂಡ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಚಾಂಪಿಯನ್​ ಆಗಿ ಹೊರ ಹೊಮ್ಮಿತ್ತು.

ಕಾಕತಾಳೀಯವೆಂದರೆ ಅಂದು ಭಾರತ ತಂಡವನ್ನು ಕೊಹ್ಲಿ ಮುನ್ನಡೆಸಿದ್ದರೆ, ನ್ಯೂಜಿಲ್ಯಾಂಡ್​ ತಂಡವನ್ನು ಕೇನ್​ ವಿಲಿಯಮ್ಸನ್​ ಮುನ್ನಡೆಸಿದ್ದರು. ಅದೇ ಟೂರ್ನಿಯ ಸೆಮಿಫೈನಲ್​ನಲ್ಲಿ ಭಾರತ-ಕಿವೀಸ್​ ಮುಖಾಮುಖಿಯಾಗಿತ್ತು.

ಅಂದು ಮೊದಲು ಬ್ಯಾಟಿಂಗ್​ ನಡೆಸಿದ್ದ ಕಿವೀಸ್​ 50 ಓವರ್​​ಗಳಲ್ಲಿ 205 ರನ್​ಗಳಿಸಿತ್ತು. ಡಿಎಲ್​ ನಿಯಮದನ್ವಯ 191 ರನ್​ಗಳ ಗುರಿ ಪಡೆದಿದ್ದ ಭಾರತ ತಂಡ ಕೊಹ್ಲಿ (43+2 ವಿಕೆಟ್​)ಆಲ್​ರೌಂಡ್​ ಪ್ರದರ್ಶನದಿಂದ 3 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

ಇದೀಗ 11 ವರ್ಷಗಳ ನಂತರ ಮತ್ತೆ ಕೊಹ್ಲಿ-ವಿಲಿಯಮ್ಸನ್​ ಮುಖಾಮುಖಿಯಾಗುತ್ತಿದ್ದಾರೆ. ಅಂದು ತಂಡದಲ್ಲಿದ್ದವರಲ್ಲಿ ಕೊಹ್ಲಿ ಜೊತೆಗೆ ಜಡೇಜಾ ಇಂದಿನ ತಂಡದಲ್ಲೂ ಇದ್ದಾರೆ. ಅತ್ತ ವಿಲಿಯಮ್ಸ್​ ಜೊತೆಗೆ ಟ್ರೆಂಟ್​ ಬೌಲ್ಟ್​ ಹಾಗೂ ಟಿಮ್​ ಸೌಥಿ ಕಿವೀಸ್​ ತಂಡದಲ್ಲಿದ್ದಾರೆ.

ಜೂನ್​ 9 ರಂದು ನಡೆಯುವ ಮೊದಲ ಸೆಮಿಫೈನಲ್ ವಿಲಿಯಮ್ಸನ್​ ಕೊಹ್ಲಿ ವಿರುದ್ದ ​ ಸೇಡು ತೀರಿಸಿಕೊಳ್ಳಲಿದ್ದಾರಾ, ಅಥವಾ ಕೊಹ್ಲಿ ತನ್ನ ವಿಜಯ ಓಟವನ್ನು ಮುಂದುವರಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.