ETV Bharat / sports

ಕೊಹ್ಲಿ​ ನಾನು ಒಳ್ಳೆಯ ಸ್ನೇಹಿತರು, ಮೈದಾನದಲ್ಲಿ ಬದ್ಧ ವೈರಿಗಳು: ಶೋಯೆಬ್ ಅಖ್ತರ್

ವಿರಾಟ್ ಕೊಹ್ಲಿ ಮತ್ತು ನನ್ನ ನಡುವೆ ಮೈದಾನದ ಹೊರಗೆ ಉತ್ತಮ ಸ್ನೇಹ ಇರುತ್ತಿತ್ತು. ಆದರೆ ಮೈದಾನದಲ್ಲಿ ಬದ್ದ ವೈರಿಗಳಾಗಿರುತ್ತಿದ್ದೆವು ಎಂದು ಅಖ್ತರ್ ಹೇಳಿದ್ದಾರೆ.

Virat Kohli and I would have been real enemies
ಮೈದಾನದಲ್ಲಿ ನಾನು ವಿರಾಟ್ ಬದ್ಧ ವೈರಿಗಳಾಗುತ್ತಿದ್ದೆವು
author img

By

Published : May 26, 2020, 6:08 PM IST

ಮುಂಬೈ: ಪ್ರಸ್ತುತ ಸಮಯದಲ್ಲಿ ನಾನು ಕ್ರಿಕೆಟ್ ಆಟದಲ್ಲಿ ಸಕ್ರಿಯನಾಗಿದ್ದರೆ ವಿರಾಟ್ ಕೊಹ್ಲಿ ಮತ್ತು ನನ್ನ ನಡುವೆ ಮೈದಾನದ ಹೊರಗೆ ಉತ್ತಮ ಸ್ನೇಹ ಇರುತ್ತಿತ್ತು. ಆದರೆ, ಮೈದಾನದಲ್ಲಿ ಬದ್ಧ ವೈರಿಗಳಾಗಿರುತ್ತಿದ್ದೆವು ಎಂದು ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

Shoaib Akhtar
ಶೋಯೆಬ್ ಅಖ್ತರ್

'ವಿರಾಟ್ ಕೊಹ್ಲಿ ಮತ್ತು ನಾನು ಪಂಜಾಬಿಗಳು ಆಗಿರುವುದರಿಂದ ಉತ್ತಮ ಸ್ನೇಹಿತರಾಗುತ್ತಿದ್ದೆವು. ಹಾಗೆಯೇ ಮೈದಾನದಲ್ಲಿ ನಾವು ಉತ್ತಮ ವೈರಿಗಳಗಿರುತ್ತಿದ್ದೆವು. ನೀವು ನನ್ನ ವಿರುದ್ಧ ಕಟ್ ಅಥವಾ ಪುಲ್ ಶಾಟ್ ಆಡಲು ಸಾಧ್ಯವಿಲ್ಲ ಎಂದು ವಿರಾಟ್​ ಕೊಹ್ಲಿಗೆ ಹೇಳುತ್ತಿದ್ದೆ ಎಂದು ವೆಬ್‌ಸೈಟ್ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಂಜಯ್ ಮಂಜ್ರೇಕರ್‌ಗೆ ಅಖ್ತರ್ ತಿಳಿಸಿದ್ದಾರೆ.

Virat Kohli
ವಿರಾಟ್ ಕೊಹ್ಲಿ

ಕ್ರೀಸ್​ನಿಂದ ದೂರವಾದ ವೈಡ್​ ಬಾಲನ್ನು ಎಸೆಯುತ್ತಿದ್ದೆ. ಅದು ಅವನ ನೆಚ್ಚಿನ ಸ್ಪಾಟ್ ಆಗಿರುವುದರಿಂದ ನನ್ನ ವೇಗ ಎಸೆತಕ್ಕೆ ಡ್ರೈವ್ ಶಾಟ್ ಆಡಲು ಒತ್ತಾಯಿಸುತ್ತಿದ್ದೆ ಎಂದು ಅಖ್ತರ್ ಹೇಳಿದ್ದಾರೆ.

ಆಟದ ಮೇಲಿನ ಗಮನ ಕಳೆದುಕೊಳ್ಳುವಂತೆ ಮಾಡಲು ನಾನು ಕೊಹ್ಲಿಯೊಂದಿಗೆ ಮಾತನಾಡುತ್ತಲೇ ಇರುತ್ತಿದ್ದೆ. ಕೊಹ್ಲಿಯ ಬಗ್ಗೆ ಹೇಳಬೇಕಾದ ಒಂದು ಉತ್ತಮ ವಿಷಯವೆಂದರೆ, ಅವರು ಸವಾಲು ಎದುರಾದಾಗ ಅಟದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ನಾನೇ ಬೌಲಿಂಗ್ ಮಾಡಿದರೂ ವಿರಾಟ್ ಅಷ್ಟೇ ಪ್ರಮಾಣದ ರನ್ ಗಳಿಸಬಹುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.