ETV Bharat / sports

ವೆಲ್ಲಿಂಗ್ಟನ್​​ನಲ್ಲಿ ಭಾರತೀಯ ಹೈಕಮಿಷನ್​ಗೆ ಕೊಹ್ಲಿ ಪಡೆ ಭೇಟಿ!

ಫೆ. 21ರಿಂದ ನ್ಯೂಜಿಲ್ಯಾಂಡ್​-ಭಾರತ ತಂಡಗಳ ನಡುವೆ ಮೊದಲ ಟೆಸ್ಟ್​ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ಕೊಹ್ಲಿ ಪಡೆ ಇಂದು ವೆಲ್ಲಿಂಗ್ಟ್​​ನಲ್ಲಿರುವ ಭಾರತೀಯ ಹೈಕಮಿಷನ್​ ಕಚೇರಿಗೆ ಭೇಟಿ ನೀಡಿದೆ.

Virat Kohli
ವಿರಾಟ್​​ ಕೊಹ್ಲಿ,ಟೀಂ ಇಂಡಿಯಾ ಕ್ಯಾಪ್ಟನ್​
author img

By

Published : Feb 19, 2020, 10:38 PM IST

ವೆಲ್ಲಿಂಗ್ಟನ್​: ಶುಕ್ರವಾರದಿಂದ ನ್ಯೂಜಿಲ್ಯಾಂಡ್​ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಭರದ ಸಿದ್ಧತೆ ನಡೆಸಿವೆ.

ಇದರ ಮಧ್ಯೆ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಲ್ಲಿಂಗ್ಟನ್​​ನಲ್ಲಿರುವ ಭಾರತೀಯ ಹೈಕಮಿಷನ್​ ಕಚೇರಿಗೆ ಭೇಟಿ ನೀಡಿತು. ಈ ವೇಳೆ ಮಾತನಾಡಿದ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ, ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿವೊಂದು ತಂಡವು ಭಾರತವನ್ನು ಟೆಸ್ಟ್​​​ನಲ್ಲಿ ಸೋಲಿಸಲು ಬಯಸುತ್ತದೆ. ಅದೇ ರೀತಿ ನ್ಯೂಜಿಲ್ಯಾಂಡ್​ ಕೂಡ ಪ್ಲಾನ್​ ಮಾಡಿಕೊಂಡು ಎದುರು ನೋಡುತ್ತಿದೆ. ಪ್ರತಿಯೊಂದು ತಂಡವು ನಮ್ಮನ್ನು ಸೋಲಿಸಲು ಬಯಸುವ ಹಂತಕ್ಕೆ ಈಗಾಗಲೇ ನಾವು ತಲುಪಿದ್ದು, ಕಳೆದ ಮೂರು-ನಾಲ್ಕು ವರ್ಷಗಳಿಂದ ನಮ್ಮ ತಂಡ ಟೆಸ್ಟ್​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಐಸಿಸಿಯ ಎಲ್ಲಾ ಟೂರ್ನಿ ಪರಿಗಣಿಸಿದಾಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಷ್ಠವಾದುದು ಎಂದರು.

ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಪ್​​ನ ಪಾಯಿಂಟ್​ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್​ 6ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಎರಡು ಟೆಸ್ಟ್​​ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.