ಅಹ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಪ್ರವಾಸಿ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಜೊತೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.
ನಾಲ್ಕನೇ ಟೆಸ್ಟ್ ಮೊದಲ ದಿನ ಮೈದಾನದಲ್ಲೇ ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಂಪೈರ್ಗಳ ಮಧ್ಯ ಪ್ರವೇಶದಿಂದ ಈ ಘಟನೆ ತಣ್ಣಗಾಗಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 32ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ
ಪಂದ್ಯದ 12ನೇ ಓವರ್ನಲ್ಲಿ ಯುವ ವೇಗಿ ಸಿರಾಜ್ ಇಂಗ್ಲೆಂಡ್ ನಾಯಕ ಜೋ ರೂಟ್ (5) ವಿಕೆಟ್ ಪಡೆದಿದ್ದರು. ಅದೇ ಓವರ್ನಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್ ಸ್ಟೋಕ್ಸ್ಗೆ ಸಿರಾಜ್ ಬೌನ್ಸರ್ ಎಸೆದರು. ಇದರಿಂದ ಕೋಪಗೊಂಡ ಸ್ಟೋಕ್ಸ್, ಸಿರಾಜ್ ವಿರುದ್ಧ ಗರಂ ಆಗಿದ್ದಾರೆ.
-
Stokes & Kohli Are Ready To Rumble 🥊#INDvENG 🏏 pic.twitter.com/B9S0neBgDo
— Gontse Lerole (@G_Lerole) March 4, 2021 " class="align-text-top noRightClick twitterSection" data="
">Stokes & Kohli Are Ready To Rumble 🥊#INDvENG 🏏 pic.twitter.com/B9S0neBgDo
— Gontse Lerole (@G_Lerole) March 4, 2021Stokes & Kohli Are Ready To Rumble 🥊#INDvENG 🏏 pic.twitter.com/B9S0neBgDo
— Gontse Lerole (@G_Lerole) March 4, 2021
ಸಿರಾಜ್ ವಿರುದ್ಧ ಅಸಂಬದ್ಧ ಬಳಕೆ ಮಾಡುತ್ತಿದ್ದನ್ನು ನೋಡಿದ ಕೊಹ್ಲಿ, ತಕ್ಷಣ ಮಧ್ಯಪ್ರವೇಶಿಸಿ ಮೊದಲು ಸ್ಟೋಕ್ಸ್ ಜೊತೆಗೆ ಮಾತನಾಡಿದ್ದಾರೆ. ಆದರೆ ಈ ಮಾತುಕತೆ ನೋಡು ನೋಡುತ್ತಿದ್ದಂತೆ ತಾರಕ್ಕೇರುತ್ತಿದ್ದಂತೆ ಅಂಪೈರ್ಗಳು ಮಧ್ಯ ಪ್ರವೇಶಿಸಿ ಇಬ್ಬರನ್ನು ಬೇರೆ ಮಾಡಿ ವಾತಾವರಣ ತಣ್ಣಗಾಗಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 205 ರನ್ಗಳಿಗೆ ಆಲೌಟ್ ಆಗಿದೆ. ಬೆನ್ ಸ್ಟೋಕ್ಸ್ 55 ಮತ್ತು ಲಾರೆನ್ಸ್ 46 ರನ್ಗಳಿಸಿದರು. ಭಾರತದ ಪರ ತಮ್ಮ ಅದ್ಭುತ ಬೌಲಿಂಗ್ ದಾಳಿಯನ್ನು ಮುಂದುವರಿಸಿದ ಅಕ್ಷರ ಪಟೇಲ್ 68ಕ್ಕೆ 4, ರವಿಚಂದ್ರನ್ ಅಶ್ವಿನ್ 47ಕ್ಕೆ 3, ಮೊಹಮ್ಮದ್ ಸಿರಾಜ್ 45ಕ್ಕೆ 2 ಮತ್ತು ಸುಂದರ್ 14ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿ: ಅಕ್ಸರ್, ಅಶ್ವಿನ್ ದಾಳಿಗೆ ಇಂಗ್ಲೆಂಡ್ 205ಕ್ಕೆ ಆಲೌಟ್; ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡ ಭಾರತ