ಬೆಂಗಳೂರು: ರಾಹುಲ್ ಮತ್ತು ಪಡಿಕ್ಕಲ್ ಅಬ್ಬರದ ಆಟದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ್ದು, ಫೈನಲ್ ಪ್ರವೇಶಿಸಿದೆ.
-
Karnataka register a 9-wicket win over Chhattisgarh to enter the final of #VijayHazare Trophy 💪💪#KARvCHH @Paytm pic.twitter.com/Y8SHHWLfR5
— BCCI Domestic (@BCCIdomestic) October 23, 2019 " class="align-text-top noRightClick twitterSection" data="
">Karnataka register a 9-wicket win over Chhattisgarh to enter the final of #VijayHazare Trophy 💪💪#KARvCHH @Paytm pic.twitter.com/Y8SHHWLfR5
— BCCI Domestic (@BCCIdomestic) October 23, 2019Karnataka register a 9-wicket win over Chhattisgarh to enter the final of #VijayHazare Trophy 💪💪#KARvCHH @Paytm pic.twitter.com/Y8SHHWLfR5
— BCCI Domestic (@BCCIdomestic) October 23, 2019
ಛತ್ತಿಸ್ಗಢ ನೀಡಿದ 224 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ಗೆ 155 ರನ್ಗಳಸಿಸುವ ಮೂಲಕ ಭದ್ರ ಬುನಾದಿ ಹಾಕಿದ್ರು. ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿದ ಪಡಿಕ್ಕಲ್ ಭರ್ಜರಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ಗಳಿಸಿ ಔಟ್ ಆದ್ರು.
ಈ ವೇಳೆ ಜೊತೆಯಾದ ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಅಂತಿಮವಾಗಿ ಕರ್ನಾಟಕ ತಂಡ 40 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಜಯದ ದಡ ಮುಟ್ಟಿತು. ತಂಡದ ಪರ ದೇವದತ್ತ ಪಡಿಕ್ಕಲ್ 92, ಕೆಲ್ ರಾಹುಲ್88 , ಮಯಾಂಕ್ ಅಗರ್ವಾಲ್ 47 ರನ್ ಗಳಿಸಿದ್ರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಛತ್ತೀಸ್ಗಢ ತಂಡಕ್ಕೆ ಆರಂಭಿಕ ಅಘಾತ ಎದುರಾಯ್ತು. ಭರ್ಜರಿ ಪ್ರದರ್ಶನ ತೋರಿದ ಬೌಲರ್ಗಳು ಎದುರಾಳಿ ತಂಡ ಚೇತರಿಸಿಕೊಳ್ಳಲು ಕೂಡ ಆವಕಾಶ ನೀಡಲಿಲ್ಲ. 100 ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
- ' class='align-text-top noRightClick twitterSection' data=''>
ಒಂದೆಡೆ ವಿಕೆಟ್ ಬೀಳುತಿದ್ದರೂ ಕ್ರಿಸ್ ಕಚ್ಚಿನಿಂತ ಅಮಂದೀಪ್ ಖರೆ 78 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾದ್ರು. ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸುಮಿತ್ ರೈಕರ್ 40 ರನ್ಗಳಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸಿದ್ರು.
-
.@klrahul11 brings up his 5⃣0⃣ from 78 balls. #KARvCHH #VijayHazare @Paytm pic.twitter.com/5vve18GpAx
— BCCI Domestic (@BCCIdomestic) October 23, 2019 " class="align-text-top noRightClick twitterSection" data="
">.@klrahul11 brings up his 5⃣0⃣ from 78 balls. #KARvCHH #VijayHazare @Paytm pic.twitter.com/5vve18GpAx
— BCCI Domestic (@BCCIdomestic) October 23, 2019.@klrahul11 brings up his 5⃣0⃣ from 78 balls. #KARvCHH #VijayHazare @Paytm pic.twitter.com/5vve18GpAx
— BCCI Domestic (@BCCIdomestic) October 23, 2019
ಅಂತಿಮವಾಗಿ ಛತ್ತೀಸ್ಗಢ ತಂಡ 49.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿತು. ತಂಡದ ಪರ ಅಮಂದೀಪ್ ಖರೆ 78, ಸುಮಿತ್ ರೈಕರ್ 40, ಅಜಯ್ ಜಾದವ್ ಮಂಡಲ್ 26ರನ್ ಗಳಿಸಿದ್ರು. ಕರ್ನಾಟಕ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕೌಶಿಕ್ 4 ವಿಕೆಟ್ ಕಬಳಿಸಿದ್ರು. ಅಭಿಮನ್ಯು ಮಿಥುನ್ 2, ಕೆ.ಗೌತಮ್ 2, ಪ್ರವೀಣ್ ದುಬೆ 2 ವಿಕೆಟ್ ಪಡೆದು ಮಿಂಚಿದ್ರು.
ಫೈನಲ್ ಪಂದ್ಯಕ್ಕೆ ಉಚಿತ ಟಿಕೆಟ್:
ಇದೇ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್ನಲ್ಲಿ ಸೆಣಸಾಡಲಿದ್ದು, ಇದಕ್ಕಾಗಿ ಉಚಿತವಾಗಿ ಟಿಕೆಟ್ ನಿಡಲಾಗುತ್ತದೆ. ಚಿನ್ನ ಸ್ವಾಮಿ ಕ್ರೀಡಾಂಗಣದ P3 ಸ್ಟಾಂಡ್ನ ಟಿಕೆಟ್ಗಳನ್ನ ಉಚಿತವಾಗಿ ನೀಡಲಾಗುತ್ತದೆ ಎಂದು ಕೆಎಸ್ಸಿಎ ತಿಳಿಸಿದೆ.