ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಜಾಟೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದಚೆರಿ ತಂಡವನ್ನ 8 ವಿಕೆಟ್ಗಳಿಂದ ಮಣಿಸಿದ ಕರ್ನಾಟಕ ಸೆಮಿಫೈನಲ್ ತಲುಪಿದೆ.
ಪುದಚೆರಿ ತಂಡ ನೀಡಿದ್ದ 208 ರನ್ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದ್ರು. ಪಡಿಕ್ಕಲ್ ಅರ್ಧಶತಕ ಸಿಡಿಸಿ ಔಟ್ ಆದ್ರು. ನಂತರ ಬಂದ ರೋಹನ್ ಕದಮ್ ರಾಹುಲ್ ಜೊತೆಗೂಡಿ ಉತ್ತಮ ರನ್ ಕಲೆಹಾಕಿದ್ರು.
- ' class='align-text-top noRightClick twitterSection' data=''>
ಭರ್ಜರಿಯಾಗಿ ಬ್ಯಾಟ್ ಬೀಸಿದ ರಾಹುಲ್ 90 ರನ್ಗಳಿಸಿ ಔಟ್ ಆದ್ರು. ಅಂತಿಮವಾಗಿ ಕರ್ನಾಟಕ ತಂಡ 41 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 213 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿತು. ಕರ್ನಾಟಕ ತಂಡದ ಪರ ಕೆ ಎಲ್ ರಾಹುಲ್ 90, ದೇವದತ್ ಪಡಿಕ್ಕಲ್ 50, ರೋಹನ್ ಕದಮ್ 50 ಮತ್ತು ಮನಿಶ್ ಪಾಂಡೆ 20 ರನ್ ಗಳಿಸಿದ್ರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪುದಚೆರಿ ತಂಡಕ್ಕೆ ಕನ್ನಡಿಗರು ಶಾಕ್ ಮೇಲೆ ಶಾಕ್ ನೀಡಿದ್ರು. ಪ್ರವೀಣ್ ದುಬೆ ಮತ್ತು ಮಿತುನ್ ದಾಳಿಗೆ ತತ್ತರಿಸಿದ ಪುದಚರಿ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. ಸಾಗರ್ ತ್ರಿವೇದಿ(54), ವೆಂಕಟೇಶ್ವರನ್ ಮಾರಿಮುತ್ತು(58) ಮತ್ತು ಫಬಿದ್ ಅಹ್ಮದ್(37) ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.
ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 207 ರನ್ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕ ತಂಡದ ಪರ ಪ್ರವೀಣ್ ದುಬೆ 3, ಕೌಶಿಕ್ 2, ಅಭಿಮನ್ಯು ಮಿಥುನ್ 2 ಮತ್ತು ಪ್ರಸೀದ್ ಕೃಷ್ಣ 1 ವಿಕೆಟ್ ಪಡೆದು ಮಿಂಚಿದ್ರು.