ನವದೆಹಲಿ: ಉತ್ತರಪ್ರದೇಶ ತಂಡದ ವಿರುದ್ಧ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದ ವೇಳೆ ಮುಂಬೈ ನಾಯಕ ಪೃಥ್ವಿ ಶಾ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಪಂದ್ಯದಿಂದ ಅರ್ಧದಲ್ಲಿಯೇ ಹೊರ ನಡೆದಿದ್ದಾರೆ. ಟೂರ್ನಿಯಲ್ಲಿ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು.
ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪೃಥ್ವಿ ಶಾ, ಇನ್ನಿಂಗ್ಸ್‌ನ 24ನೇ ಓವರ್ನಲ್ಲಿ ಗಾಯಗೊಂಡರು. ಯುವ ಲೆಗ್ ಸ್ಪಿನ್ನರ್ ಪ್ರಶಾಂತ್ ಸೋಲಂಕಿ ಅವರ ಎಸೆತದಲ್ಲಿ ಮಹದೇವ ಕೌಶೀಕ್ ಹೊಡೆದ ಬಾಲ್ ಪೃಥ್ವಿ ಶಾ ಕಡೆ ಬಂದಿದೆ. ಬಹಳ ವೇಗವಾಗಿದ್ದ ಬಾಲ್ ಹಿಡಿಯುವಾಗ ಮಿಸ್ ಆಗಿ ಶಾ ಅವರ ಎಡಗಾಲಿನ ಮೊಣಕಾಲಿಗೆ ಬಡಿಯಿತು. ಪರಿಣಾಮ, ಗಂಭೀರವಾಗಿ ಗಾಯಗೊಂಡು ಪಂದ್ಯದಿಂದ ಅರ್ಧದಲ್ಲಿಯೇ ಹೊರ ಬಿದ್ದರು.
ಗಾಯಾಳು ಶಾ ಅವರನ್ನು ತಕ್ಷಣವೇ ಫಿಸಿಯೋ ಮತ್ತು ಅವರ ತಂಡದ ಆಟಗಾರರು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಮುಂಬೈ ಇನ್ನಿಂಗ್ಸ್‌ನಲ್ಲಿ ಶಾ ಬ್ಯಾಟಿಂಗ್ ಮಾಡಲು ಬರುತ್ತಾರೋ, ಇಲ್ಲವೋ ಎಂಬುದಿನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಏಕದಿನ ಕ್ರಿಕೆಟ್ನಲ್ಲಿ 7000 ರನ್ : ಮಿಥಾಲಿ ರಾಜ್ ಮುಡಿಗೆ ಮತ್ತೊಂದು ದಾಖಲೆ
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಯುಪಿ ತಂಡ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 312 ರನ್ಗಳಿಸಿದೆ.