ಕೇಪ್ಟೌನ್: ದಕ್ಷಿಣ ಆಫ್ರಿಕಾದ ಹಿರಿಯ ಆಲ್ರೌಂಡರ್ ವೆರ್ನಾನ್ ಫಿಲಾಂಡರ್ ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಯ ನಂತರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ.
ಈಗಾಗಲೇ 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡುಮಿನಿ, ಹಾಶಿಮ್ ಆಮ್ಲ, ಇಮ್ರಾನ್ ತಾಹೀರ್ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಕ್ರಿಕೆಟ್ಗೆ ಡೇಲ್ ಸ್ಟೈನ್ ನಿವೃತ್ತಿ ಘೋಷಿಸಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಹರಿಣಗಳ ಪಡೆ ಸಾಲು ಸಾಲು ಸೋಲು ಕಂಡು ನಿರಾಶೆ ಅನುಭವಿಸಿದೆ. ಆದರೆ ಫಿಲಾಂಡರ್ ಕೂಡ ಇಂಗ್ಲೆಂಡ್ ಸರಣಿಯ ನಂತರ ನಿವೃತ್ತಿ ಘೋಷಿಸಲು ನಿರ್ಧರಿಸಿರುವುದು ಆಫ್ರಿಕನ್ ಪಡೆಗೆ ಆಘಾತ ತಂದಿದೆ.
-
Proteas all-rounder Vernon Philander (@VDP_24 ), has called time on an exemplary international career with the announcement of his retirement from all forms of international cricket at the end of the Test series against England in January 2020.#BigVernRetires#Thread pic.twitter.com/GqRDtXHqsx
— Cricket South Africa (@OfficialCSA) December 23, 2019 " class="align-text-top noRightClick twitterSection" data="
">Proteas all-rounder Vernon Philander (@VDP_24 ), has called time on an exemplary international career with the announcement of his retirement from all forms of international cricket at the end of the Test series against England in January 2020.#BigVernRetires#Thread pic.twitter.com/GqRDtXHqsx
— Cricket South Africa (@OfficialCSA) December 23, 2019Proteas all-rounder Vernon Philander (@VDP_24 ), has called time on an exemplary international career with the announcement of his retirement from all forms of international cricket at the end of the Test series against England in January 2020.#BigVernRetires#Thread pic.twitter.com/GqRDtXHqsx
— Cricket South Africa (@OfficialCSA) December 23, 2019
ಹೀನಾಯ ಪ್ರದರ್ಶನದಿಂದ ಕಳೆಗುಂದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಮತ್ತೆ ಕಟ್ಟುವ ಸಲುವಾಗಿ ಗ್ರೇಮ್ ಸ್ಮಿತ್ರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಆಗಿ ನೇಮಕ ಮಾಡಿಲಾಗಿದ್ದು, ಕೋಚ್ಗಳಾಗಿ ಮಾರ್ಕ್ ಬೌಷರ್, ಜಾಕ್ ಕಾಲೀಸ್ ಹಾಗೂ ಲಾಂಗ್ವೆಲ್ಟ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ಇನ್ನು ತಂಡ ಒಂದು ಸರಣಿ ಆಡುವ ಮೊದಲೇ ಫಿಲಾಂಡರ್ ನಿವೃತ್ತಿ ಘೋಷಿಸಿರುವುದು ಬೌಷರ್ ಪಡೆಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಫಿಲಾಂಡರ್ ದಕ್ಷಿಣ ಆಫ್ರಿಕಾ ತಂಡದ ಪರ 60 ಟೆಸ್ಟ್, 30 ಏಕದಿನ ಪಂದ್ಯ ಹಾಗೂ 7 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 316 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 41 ವಿಕೆಟ್ ಹಾಗೂ ಟಿ-20ಯಲ್ಲಿ 4 ವಿಕೆಟ್ ಪಡೆದಿದ್ದಾರೆ.