ETV Bharat / sports

ದೆಹಲಿ ವಿರುದ್ಧ ಗೆದ್ದ ಯುಪಿಗೆ ಗುಜರಾತ್ ಸವಾಲು, ಕರ್ನಾಟಕಕ್ಕೆ ಮುಂಬೈ ಎದುರಾಳಿ

ಯುಪಿ ಪರ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಉಪೇಂದ್ರ ಯಾದವ್​ 101 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 112 ರನ್​ಗಳಿಸಿದರೆ, ನಾಯಕ ಕರಣ್ ಶರ್ಮಾ 83 ರನ್​ಗಳಿಸಿದ್ದರು. ಸಮೀರ್ ಚೌದರಿ 43 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

ವಿಜಯ್ ಹಜಾರೆ ಸೆಮಿಫೈನಲ್ಸ್
ವಿಜಯ್ ಹಜಾರೆ ಸೆಮಿಫೈನಲ್ಸ್
author img

By

Published : Mar 9, 2021, 6:03 PM IST

ನವದೆಹಲಿ: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್​ ಫೈನಲ್​ನಲ್ಲಿ ದೆಹಲಿ ತಂಡವನ್ನು 46 ರನ್​ಗಳಿಂದ ಬಗ್ಗುಬಡಿದ ಉತ್ತರಪ್ರದೇಶ ತಂಡ ಸೆಮಿಫೈನಲ್​ ಪ್ರವೇಶಿಸಿದ್ದು ಟೂರ್ನಿಯ ಉಪಾಂತ್ಯದಲ್ಲಿ ಗುಜರಾತ್​ ವಿರುದ್ಧ ಸೆಣಸಲಿದೆ. ಬಲಿಷ್ಠ ತಂಡಗಳಾದ ಕರ್ನಾಟಕ ಮತ್ತು ಮುಂಬೈ ತಂಡಗಳು ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಕಾದಾಡಲಿವೆ.

ಮಂಗಳವಾರ ಮುಕ್ತಾಯವಾದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಟಾಸ್ ಸೋತು ಬ್ಯಾಟಿಂಗ್ ಮಾಡಿ 280 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ದೆಹಲಿ ತಂಡ 234 ರನ್​ಗಳಿಗೆ ಆಲೌಟ್ ಆಗುವ ಮೂಲಕ 46 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಯುಪಿ ಪರ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಉಪೇಂದ್ರ ಯಾದವ್​ 101 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 112 ರನ್​ಗಳಿಸಿದರೆ, ನಾಯಕ ಕರಣ್ ಶರ್ಮಾ 83 ರನ್​ಗಳಿಸಿದ್ದರು. ಸಮೀರ್ ಚೌದರಿ 43 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.

281ರನ್​ಗಳ ಗುರಿ ಬೆನ್ನತ್ತಿದ ದೆಹಲಿ ತಂಡ 48.1 ಓವರ್​ಗಳಲ್ಲಿ 234 ರನ್​ಗಳಿಗೆ ಆಲೌಟ್ ಆಯಿತು. ಹಿಮ್ಮತ್ ಸಿಂಗ್ 39 , ಲಲಿತ್ ಯಾದವ್​ 61 , ಅನುಜ್ ರಾವತ್​ 47 ರನ್​ಗಳಿಸಿ ಗೆಲುವಿಗಾಗಿ ವಿಫಲ ಹೋರಾಟ ನಡೆಸಿದರು.

ಯುಪಿ ಪರ ಯಶ್ ದಯಾಳ್ 53ಕ್ಕೆ 3, ಶಿವಮ್ ಮಾವಿ 31ಕ್ಕೆ 1, ಆಕಿಬ್ ಖಾನ್ 60ಕ್ಕೆ2 ಹಾಗೂ ಅಕ್ಷ್​ದೀಪ್​ ನಾಥ್​ 29ಕ್ಕೆ 2 ವಿಕೆಟ್​ ಪಡೆದರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಗುಜರಾತ್​ ವಿರುದ್ಧ ಮತ್ತು ಮುಂಬೈ ಕರ್ನಾಟಕ ತಂಡವನ್ನು ಎದುರಿಸಲಿವೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.