ವಿಶಾಖಪಟ್ಟಣಂ: ನಿನ್ನೆ ಆಸೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಅನುಭವಿಸಿದೆ. ಗೆಲ್ಲಬಹುದಾದ ಪಂದ್ಯದಲ್ಲಿ ಕೊನೆಯ ಓವರ್ ಎಸೆದು ರನ್ ನೀಡಿದ ವೇಗಿ ಉಮೇಶ್ ಯಾದವ್ ನೆಟ್ಟಿಗರ ಟ್ರೋಲ್ಗೆ ತುತ್ತಾಗಿದ್ದಾರೆ.
Brilliant Maxwell powers Australia to a thrilling final ball victory. They lead the two match T20 series 1-0. #INDvAUS https://t.co/3ucfRZkCNY pic.twitter.com/Q1XijxFNkb
— Cricbuzz (@cricbuzz) February 24, 2019 " class="align-text-top noRightClick twitterSection" data="
">Brilliant Maxwell powers Australia to a thrilling final ball victory. They lead the two match T20 series 1-0. #INDvAUS https://t.co/3ucfRZkCNY pic.twitter.com/Q1XijxFNkb
— Cricbuzz (@cricbuzz) February 24, 2019Brilliant Maxwell powers Australia to a thrilling final ball victory. They lead the two match T20 series 1-0. #INDvAUS https://t.co/3ucfRZkCNY pic.twitter.com/Q1XijxFNkb
— Cricbuzz (@cricbuzz) February 24, 2019
ಪಂದ್ಯ ಸೋತ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಉಮೇಶ್ ಭಾರೀ ಆಕ್ರೋಶಕ್ಕೆ ಒಳಗಾಗಿದ್ದಾರೆ. ವಿವಿಧ ಮೆಮೆ ಮೂಲಕ ಉಮೇಶ್ರ ಕಾಲೆಳೆದಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 126 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಆದರೂ ಕೂಡ ಜಸ್ಪ್ರೀತ್ ಬೂಮ್ರಾ ಅವರು ಮಾರಕ ಬೌಲಿಂಗ್ ಮೂಲಕ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದ್ದರು.
Virat Kohli beating up Umesh Yadav in the dressing room#INDvAUS pic.twitter.com/3QhHx4Mlrs
— Sid (@SidKSchrute) February 24, 2019 " class="align-text-top noRightClick twitterSection" data="
">Virat Kohli beating up Umesh Yadav in the dressing room#INDvAUS pic.twitter.com/3QhHx4Mlrs
— Sid (@SidKSchrute) February 24, 2019Virat Kohli beating up Umesh Yadav in the dressing room#INDvAUS pic.twitter.com/3QhHx4Mlrs
— Sid (@SidKSchrute) February 24, 2019
ಆಸೀಸ್ಗೆ 12 ಎಸೆತಗಳಲ್ಲಿ ಗೆಲುವಿಗೆ 16 ರನ್ ಬೇಕಿತ್ತು. ಆಗ 19ನೇ ಓವರ್ ಮಾಡಿದ ಬೂಮ್ರಾ ಕೇವಲ 2 ರನ್ ನೀಡಿ 2 ವಿಕೆಟ್ ಉರುಳಿಸಿ ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡಿದ್ದರು. ಆದರೆ ಅಂತಿಮ ಓವರ್ನಲ್ಲಿ 14 ರನ್ ಬೇಕಿದ್ದರೂ ಆಸೀಸ್ ಬಾಲಂಗೋಚಿಗಳನ್ನು ನಿಯಂತ್ರಿಸುವಲ್ಲಿ ಯಾದವ್ ವಿಫಲರಾದರು. ಉಮೇಶ್ 2 ಬೌಂಡರಿ ಸಹಿತ 14 ರನ್ ನೀಡಿದ್ದರಿಂದ ರೋಚಕ ಪಂದ್ಯದಲ್ಲಿ ಭಾರತ ಸೋಲಬೇಕಾಯಿತು.
ಇನ್ನು ಗೆಲ್ಲಬಹುದಾದ ಪಂದ್ಯವನ್ನು ಸೋತಿದ್ದನ್ನು ಸಹಿಸದ ಅಭಿಮಾನಿಗಳು ಉಮೇಶ್ ಮೇಲೆ ಟ್ರೋಲ್ ಸುರಿಮಳೆಗರೆದಿದ್ದಾರೆ.