ಮುಂಬೈ: ಕಳೆದೆರಡು ದಿನಗಳ ಹಿಂದೆ ಭಾರತ-ಬಾಂಗ್ಲಾದೇಶ ನಡುವಿನ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲೇ ಅನುಚಿತವಾಗಿ ವರ್ತನೆ ತೋರಿ, ಭಾರತದ ಪ್ಲೇಯರ್ಸ್ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ ಘಟನೆ ನಡೆದಿತ್ತು. ಇದೀಗ ಇದನ್ನ ಐಸಿಸಿ ಗಂಭೀರವಾಗಿ ಪರಿಣಗಿಸಿದೆ.
ಈ ಸ್ಟೋರಿ ಕೂಡ ಓದಿ: ಫೈನಲ್ ಗೆಲ್ಲುತ್ತಿದ್ದಂತೆ ದುರ್ವರ್ತನೆ... ಟೀಂ ಇಂಡಿಯಾ ವಿರುದ್ಧ ಕೆಟ್ಟದಾಗಿ ವರ್ತಿಸಿದ ಬಾಂಗ್ಲಾ ಕ್ರಿಕೆಟರ್ಸ್!
ಟೀಂ ಇಂಡಿಯಾ ಪ್ಲೇಯರ್ಸ್ ವಿರುದ್ಧ ಮೈದಾನದಲ್ಲೇ ಅಸಭ್ಯವಾಗಿ ವರ್ತನೆ ತೋರಿರುವ ಬಾಂಗ್ಲಾದೇಶದ ಮೂವರು ಪ್ಲೇಯರ್ಸ್ ಹಾಗೂ ಭಾರತದ ಇಬ್ಬರು ಆಟಗಾರರ ವಿರುದ್ಧ ಕ್ರಮಕ್ಕೆ ಐಸಿಸಿ ಮುಂದಾಗಿದೆ. ಟೀಂ ಇಂಡಿಯಾದ ರವಿ ಬಿಷ್ಣೋಯ್ ಮತ್ತು ಆಕಾಶ್ ಸಿಂಗ್ ಹಾಗೂ ಬಾಂಗ್ಲಾದ ಮೊಹಮ್ಮದ್ ಹೃದೋಯ್, ಶಮೀಮ್ ಹೊಸೈನ್, ರಕಿಬುಲ್ ಹುಸೇನ್ ವಿರುದ್ಧ ಐಸಿಸಿ ಐಸಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
-
International Cricket Council (ICC): Five players have been found guilty of a Level 3 breach of the ICC Code of Conduct for Players and Support Personnel following the final of the ICC U19 Cricket World Cup in Potchefstroom in South Africa. #U19WorldCup pic.twitter.com/iGAiVfjqMI
— ANI (@ANI) February 10, 2020 " class="align-text-top noRightClick twitterSection" data="
">International Cricket Council (ICC): Five players have been found guilty of a Level 3 breach of the ICC Code of Conduct for Players and Support Personnel following the final of the ICC U19 Cricket World Cup in Potchefstroom in South Africa. #U19WorldCup pic.twitter.com/iGAiVfjqMI
— ANI (@ANI) February 10, 2020International Cricket Council (ICC): Five players have been found guilty of a Level 3 breach of the ICC Code of Conduct for Players and Support Personnel following the final of the ICC U19 Cricket World Cup in Potchefstroom in South Africa. #U19WorldCup pic.twitter.com/iGAiVfjqMI
— ANI (@ANI) February 10, 2020
ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲೇ ಸಂಭ್ರಮಿಸಿದ ಬಾಂಗ್ಲಾ ಉದ್ಧಟತನ ಮೆರೆದು, ಭಾರತೀಯ ಪ್ಲೇಯರ್ಸ್ಗಳನ್ನ ಕಿಚಾಯಿಸಿದ್ದರು. ಈ ವೇಳೆ ಭಾರತದ ಪ್ಲೇಯರ್ಸ್ ಮೇಲೆ ದೈಹಿಕ ಹಲ್ಲೆಗೂ ಎದುರಾಳಿ ತಂಡದ ಪ್ಲೇಯರ್ಸ್ ಮುಂದಾಗಿದ್ದರೂ ಎಂದು ತಿಳಿದು ಬಂದಿದೆ.
ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಾಗಿ ಲೆವೆಲ್ 3 ಪ್ರಕಾರ ಸಸ್ಪೆನ್ಷನ್ ಹಾಗೂ ಡಿಮೆರಿಟ್ ಪಾಯಿಂಟ್ಸ್ ನೀಡಿದೆ. ಸಸ್ಪೆನ್ಷನ್ ಅಂಕಗಳ ಪ್ರಕಾರ 5 ರಿಂದ 10 ಅಂಡರ್-19 ಪಂದ್ಯ, ಎ ತಂಡ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಪ್ಲೇಯರ್ಸ್ ಭಾಗಿಯಾಗುವಂತಿಲ್ಲ.