ಪೊಚೆಫ್‌ಸ್ಟ್ರೂಮ್: ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ವಿರುದ್ಧ ಪಾಕ್ ಸುಲಭ ಗೆಲುವು ದಾಖಲು ಮಾಡಿದ್ದು, ಇದೀಗ ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಸಾಂಪ್ರದಾಯಿಕ ಎದುರಾಳಿ ಫೈಟ್ ನಡೆಸಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಆಫ್ಘಾನ್ ತಂಡ 198ರನ್ಗಳಿಗೆ ಆಲೌಟ್ ಆಯ್ತು. ಇದರ ಬೆನ್ನತ್ತಿದ್ದ ಪಾಕಿಸ್ತಾನ ತಂಡ 41 ಓವರ್ಗಳಲ್ಲಿ ಕೇವಲ 4ವಿಕೆಟ್ ಕಳೆದುಕೊಂಡು 190ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಪಾಕ್ ಪರ ಮೊಹಮ್ಮದ್ 64ರನ್ಗಳಿಕೆ ಮಾಡಿದರು. ಇದೀಗ ಸೆಮಿಫೈನಲ್ನಲ್ಲಿ ಬರುವ ಗುರುವಾರ ಸಾಂಪ್ರದಾಯಿಕ ಎದುರಾಳಿ ತಂಡಗಳು ಫೈಟ್ ನಡೆಸಲಿವೆ.
2018ರಲ್ಲೂ ಇಂಡಿಯಾ-ಪಾಕಿಸ್ತಾನ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಪೃಥ್ವಿ ಶಾ ನೇತೃತ್ವದ ಟೀಂ ಇಂಡಿಯಾ 203ರನ್ಗಳ ಭರ್ಜರಿ ಗೆಲುವು ದಾಖಲು ಮಾಡಿತು.ಇದೀಗ ಗ್ರೂಪ್ 'A' ವಿಭಾಗದಲ್ಲಿ ಟೀಂ ಇಂಡಿಯಾ ಮೂರು ಗೆಲುವಿನೊಂದಿಗೆ ಟಾಪ್ನಲ್ಲಿದ್ದು, ಸೆಮಿಫೈನಲ್ನಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ.