ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಅಂಡರ್ 19 ತ್ರಿಕೋನ ಸರಣಿಯಲ್ಲಿ ಯುವ ಭಾರತ ತಂಡ ಬಾಂಗ್ಲಾದೇಶದ ವಿರುದ್ದ 2 ವಿಕೆಟ್ಗಳ ರೋಚಕ ಸೋಲುಕಂಡಿದೆ.
ಮಳೆಯಿಂದ 50 ಓವರ್ಗಳ ಪಂದ್ಯವನ್ನು 36 ಓವರ್ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 5 ವಿಕೆಟ್ಗಳನ್ನ 21 ರನ್ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕಮ್ರಾನ್ ಇಕ್ಬಾಲ್ 44, ಪ್ರಗ್ನೇಶ್ ಕನ್ಪಿಲ್ಲೇವರ್ 53, ಹಾಗೂ ನಾಯಕ ಧ್ರುವ್ ಜುರೆಲ್ ಅವರ 70 ರನ್ಗಳ ಸಹಾಯದಿಂದ 221 ರನ್ಗಳ ಸ್ಪರ್ಧಾತ್ಮ ಮೊತ್ತ ದಾಖಲಿಸಿತ್ತು.
ಆದರೆ, ಮತ್ತೆ ಮಳೆ ಸುರಿದ ಪರಿಣಾಮ ಬಾಂಗ್ಲಾದೇಶ ತಂಡಕ್ಕೆ 32 ಓವರ್ಗಳಲ್ಲಿ 218 ರನ್ಗಳ ಗುರಿ ನಿಗದಿಮಾಡಲಾಗಿತ್ತು. ಉತ್ತಮ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ 31.3 ಓವರ್ಗಳಲ್ಲಿ 219 ರನ್ಗಳಿಸುವ ಮೂಲಕ ಇನ್ನು 3 ಎಸೆತಗಳಿರುವಂತೆ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಲ್ಲದೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.
ಬಾಂಗ್ಲಾ ತಂಡಕ್ಕೆ ಕೊನೆಯ 20 ಬಾಲಿಗೆ 31 ರನ್ಗಳ ಅಗತ್ಯವಿತ್ತು ಕೈಯಲ್ಲಿದ್ದದ್ದು 3 ವಿಕೆಟ್. ಈ ಸಂದರ್ಭದಲ್ಲಿ ಭಾರತ ತಂಡವೇ ಗೆಲುವಿನ ನೆಚ್ಚಿನ ತಂಡವಾಗಿತ್ತು. ಆದರೆ, ಬಾಂಗ್ಲಾತಂಡದ ನಾಯಕ ಅಕ್ಬರ್ ಅಲಿ 35 ಎಸೆತಗಳಲ್ಲಿ 5 ಬೌಂಡರಿ ಎರುಡು ಸಿಕ್ಸರ್ ಸಿಡಿಸಿ ತಂಡದ ಗೆಲುವನ್ನು ಭಾರತ ತಂಡದಿಂದ ಕಿತ್ತು ಕೊಂಡರು.
ಈ ಸೋಲಿನೊಂದಿಗೆ ಭಾರತ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ 5 ಅಂಕಗಳೊಡನೆ ಎರಡನೇ ಸ್ಥಾನಕ್ಕೆ ಕುಸಿಯಿತು. ಬಾಂಗ್ಲಾ 3ನೇ ಗೆಲುವು ಪಡೆದು ಮೊದಲ ಸ್ಥಾನಕ್ಕೇರಿತು. ಇನ್ನು ಆತಿಥೇಯ ಇಂಗ್ಲೆಂಡ್ ಒಂದು ಗೆಲುವು 3 ಸೋಲಿನೊಂದಿಗೆ 2 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.