ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ತಂಡ ಕೋವಿಡ್ -19 ಟೆಸ್ಟ್ನಲ್ಲಿ ನೆಗೆಟಿವ್ ಪಡೆದ ನಂತರ ಶನಿವಾರ ಹೊರಾಂಗಣ ತರಬೇತಿ ಆರಂಭಿಸಿದೆ.
ಐಪಿಎಲ್ ಮುಗಿಸಿ ಆಸ್ಟ್ರೇಲಿಯಾ ತಲುಪಿರುವ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಕ್ರಿಕೆಟಿಗರು ಸಿಡ್ನಿ ಒಲಿಂಪಿಕ್ ಪಾರ್ಕ್ ಒಳಗಿನ ಬ್ಲಾಕ್ಟೌನ್ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ತರಬೇತಿ ಸೆಷನ್ನಲ್ಲಿ ಭಾಗವಹಿಸಿದ್ದರು.
-
Two days off the plane and #TeamIndia had their first outdoor session today. A bit of 🏃 to get the body moving! #AUSIND pic.twitter.com/GQkvCU6m15
— BCCI (@BCCI) November 14, 2020 " class="align-text-top noRightClick twitterSection" data="
">Two days off the plane and #TeamIndia had their first outdoor session today. A bit of 🏃 to get the body moving! #AUSIND pic.twitter.com/GQkvCU6m15
— BCCI (@BCCI) November 14, 2020Two days off the plane and #TeamIndia had their first outdoor session today. A bit of 🏃 to get the body moving! #AUSIND pic.twitter.com/GQkvCU6m15
— BCCI (@BCCI) November 14, 2020
ಭಾರತೀಯ ಆಟಗಾರರು ಮೈದಾನದಲ್ಲಿ ರನ್ನಿಂಗ್ ಮಾಡುತ್ತಿರುವುದು, ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವ ಕೆಲವು ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಸ್ಪಿನ್ನರ್ ಕುಲ್ದೀಪ್ ಯಾದವ್, ಪೇಸರ್ ಉಮೇಶ್ ಯಾದವ್, ಆಲ್ರೌಂಡರ್ ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್ ಮತ್ತು ಟೆಸ್ಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಮೈದಾನದಲ್ಲಿ ಬೆವರಿಸಿಳಿಸಿದ್ದಾರೆ.
-
Back with my brother @imkuldeep18 and back on national duty for 🇮🇳#TeamIndia 💪 #spintwins #kulcha pic.twitter.com/NmWmccaEXt
— Yuzvendra Chahal (@yuzi_chahal) November 14, 2020 " class="align-text-top noRightClick twitterSection" data="
">Back with my brother @imkuldeep18 and back on national duty for 🇮🇳#TeamIndia 💪 #spintwins #kulcha pic.twitter.com/NmWmccaEXt
— Yuzvendra Chahal (@yuzi_chahal) November 14, 2020Back with my brother @imkuldeep18 and back on national duty for 🇮🇳#TeamIndia 💪 #spintwins #kulcha pic.twitter.com/NmWmccaEXt
— Yuzvendra Chahal (@yuzi_chahal) November 14, 2020
ಪ್ರಸ್ತುತ ಟೀಮ್ ಇಂಡಿಯಾ 14 ದಿನಗಳ ಕ್ವಾರಂಟೈನ್ನಲ್ಲಿದೆ. ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ಪಡೆದಿದ್ದಾರೆಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.
3 ಪಂದ್ಯಗಳ ಏಕದಿನ ಸರಣಿ ನವೆಂಬರ್ 27ರಂದು ಆರಂಭವಾಗಲಿದೆ. ನಂತರ 29 ಮತ್ತು ಡಿಸೆಂಬರ್ 2ರಂದು 2 ಮತ್ತು 3ನೇ ಏಕದಿನ ಪಂದ್ಯ, ಡಿಸೆಂಬರ್ 4, 6, 8ರಂದು 3 ಪಂದ್ಯಗಳ ಟಿ-20 ನಡೆಯಲಿದೆ.