ಚೆನ್ನೈ: ಇದೇ ತಿಂಗಳಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಗಾಗಿ ಟಿಎನ್‌ಸಿಎ ಘೋಷಿಸಿದ್ದ ತಮಿಳುನಾಡು ತಂಡದಿಂದ ಭಾರತ ತಂಡದ ವೇಗಿ ಟಿ.ನಟರಾಜನ್ ಅವರನ್ನು ಕೈಬಿಟ್ಟಿದೆ. ಬಿಸಿಸಿಐ ಮನವಿಗೆ ಸ್ಪಂದಿಸಿ ಬೋರ್ಡ್ ಈ ನಿರ್ಧಾರ ತೆಗೆದುಕೊಂಡಿದೆ.
ಬಿಸಿಸಿಐ ಮತ್ತು ಭಾರತೀಯ ತಂಡದ ಆಡಳಿತ ಮಂಡಳಿ ನಟರಾಜನ್ ಅವರನ್ನು ಇಂಗ್ಲೆಂಡ್ ವಿರುದ್ಧದ ವೈಟ್ - ಬಾಲ್ ಸರಣಿಗೆ ಹೊಸ ಉತ್ಸಾಹದಲ್ಲಿ ಕಾಣಬೇಕೆಂದು ಬಯಸಿದೆ. ಹಾಗಾಗಿ ಭಾರತೀಯ ತಂಡದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಹೌದು ಈ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕಾರ್ಯದರ್ಶಿ ಆರ್ಎಸ್ ರಾಮಸ್ವಾಮಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಫೆಬ್ರವರಿ 13ರಂದು 50 ಓವರ್ಗಳ ಟೂರ್ನಿಗಾಗಿ ಇಂಧೋರ್ಗೆ ತೆರಳುತ್ತಿರುವ 20 ಮಂದಿ ಸದಸ್ಯರ ತಮಿಳುನಾಡು ತಂಡದೊಂದಿದೆ ನಟರಾಜನ್ ಬದಲು ಆರ್ಎಸ್ ಜಗನಾಥ್ ತೆರಳಲಿದ್ದಾರೆ. ತಮಿಳುನಾಡು ತಂಡ ಇತ್ತೀಚೆಗೆ ಮುಗಿದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಆಗಿತ್ತು.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ-20 ಸರಣಿ ಮಾರ್ಚ್ 12ರಂದು ಆರಂಭವಾಗಲಿದೆ. ನಂತರ ಮಾರ್ಚ್ 23ರಿಂದ ಏಕದಿನ ಸರಣಿ ಶುರುವಾಗಲಿದೆ.