ಯಾರ್ಕ್ಷೈರ್: ಇಂಗ್ಲೆಂಡ್ ಆಲ್ರೌಂಡರ್ ಟಿಮ್ ಬ್ರೆಸ್ನನ್ ತಾವೂ ಸುದೀರ್ಘ 19 ವರ್ಷಗಳ ಕಾಲ ಪ್ರತಿನಿಧಿಸಿದ್ದ ಯಾರ್ಕ್ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ನಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.
2003 ರಲ್ಲಿ ಟಿಮ್ ಬ್ರೆಸ್ನನ್ ಯಾರ್ಕ್ಷೈರ್ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಯಾರ್ಕ್ಷೈರ್ ತಂಡದೊಂದಿಗೆ ಶ್ರೇಷ್ಠ ವೃತ್ತಿ ಜೀವನ ಆನಂದಿಸಿರುವ ಬ್ರೆಸ್ನನ್ 2014 ಮತ್ತು 2015ರಂದು ಬ್ಯಾಕ್ ಟು ಬ್ಯಾಕ್ ಕೌಂಟಿ ಚಾಂಪಿಯನ್ಶಿಪ್ ಗೆದ್ದ ಯಾರ್ಕ್ಷೈರ್ ತಂಡದ ಅವಿಭಾಜ್ಯ ಅಂಗವಾಗಿದ್ದರು.

" ನನಗೆ 19 ಅದ್ಭುತ 19 ವರ್ಷಗಳು ಮತ್ತು ನನ್ನ ವೃತ್ತಿ ಜೀವನವನ್ನು ಪ್ರಾರಂಭಿಸಲು ಅವಕಾಶ ನೀಡಿದ್ದಕ್ಕಾಗಿ ನಾನು ಯಾರ್ಕ್ಷೈರ್ಗೆ ಧನ್ಯವಾದ ಹೇಳಲು ಬಯಸುತ್ತೇನೆ . ಕಿರಿಯ ಆಟಗಾರರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ನಾನು ತಂಡದಿಂದ ಹೊರ ಹೋಗುವ ನಿರ್ಧಾರ ಮಾಡಿದ್ದೇನೆ "ಎಂದು 35 ವರ್ಷದ ಆಟಗಾರ ಹೇಳಿದ್ದಾರೆ.

ಎರಡು ದಶಕಗಳ ಕಾಲ ಕೌಂಟಿ ಕ್ರಿಕೆಟ್ನಲ್ಲಿ ಭಾಗವಹಿಸಿದ್ದಕ್ಕೆ ನನಗೆ ಅಪಾರ ಹೆಮ್ಮೆಯಿದೆ. ಯಾರ್ಕ್ಷೈರ್ ಕ್ಯಾಪ್ ನನ್ನ ಹೆಮ್ಮೆಯ ಆಸ್ತಿಯಾಗಿದೆ ಎಂದು ಬ್ರೆಸ್ನನ್ ಹೇಳಿದ್ದಾರೆ. ಈ ನಿರ್ಧಾರವನ್ನು ನಾನು ಲಘುವಾಗಿ ತೆಗೆದುಕೊಂಡಿಲ್ಲ. ಆದರೆ, ತಂಡದಿಂದ ಹೊರ ಹೋಗಲು ಇದು ಒಳ್ಳೆಯ ಸಮಯ. ನನ್ನಲ್ಲಿ ಇನ್ನು ಸಾಕಷ್ಟು ಕಿಚ್ಚಿದೆ, ಭವಿಷ್ಯದ ಬಗ್ಗೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಬ್ರೆಸ್ನನ್ 199 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಂದ 557 ವಿಕೆಟ್ ಪಡೆದಿದ್ದು, 6,714 ರನ್ಗಳಿಸಿದ್ದಾರೆ. 173 ಲಿಸ್ಸ್ ಎ ಪಂದ್ಯಗಳಿಂದ 3,221 ರನ್ ಹಾಗೂ 315 ವಿಕೆಟ್ ಪಡೆದಿದ್ದಾರೆ. ಬ್ರಸ್ನನ್ ಇಂಗ್ಲೆಂಡ್ 23 ಟೆಸ್ಟ್ , 85 ಏಕದಿನ ಹಾಗೂ 34 ಟಿ-20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 72, 109 ಮತ್ತು 24 ವಿಕೆಟ್ ಪಡೆದಿದ್ದಾರೆ.