ಹೈದರಾಬಾದ್: ಹಿಟ್ಮ್ಯಾನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಇವರು ಏಕದಿನ ಹಾಗು ಟಿ-20 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3 ಡಬಲ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಆಟಗಾರ ಕೂಡಾ ಹೌದು.
ಶ್ರೀಲಂಕಾ ವಿರುದ್ಧ ಮೂರನೇ ಡಬಲ್ ಸೆಂಚುರಿ ಸಿಡಿಸಿದ್ದ ಹಿಟ್ಮ್ಯಾನ್
-
On This Day 3 Years Ago@ImRo45 Hits 4 Consecutive Sixes in a Over 💉
— ADARSH (@Adarshdvn45) December 13, 2020 " class="align-text-top noRightClick twitterSection" data="
3rd ODI Double Hundred For Hitman 🔥 pic.twitter.com/w8c17mbPMi
">On This Day 3 Years Ago@ImRo45 Hits 4 Consecutive Sixes in a Over 💉
— ADARSH (@Adarshdvn45) December 13, 2020
3rd ODI Double Hundred For Hitman 🔥 pic.twitter.com/w8c17mbPMiOn This Day 3 Years Ago@ImRo45 Hits 4 Consecutive Sixes in a Over 💉
— ADARSH (@Adarshdvn45) December 13, 2020
3rd ODI Double Hundred For Hitman 🔥 pic.twitter.com/w8c17mbPMi
2017 ರ ಡಿಸೆಂಬರ್ 13 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ತಮ್ಮ ಮೂರನೇ ಡಬಲ್ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 13 ಬೌಂಡರಿ, 12 ಸಿಕ್ಸರ್ ಸಮೇತ 208 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 141 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
ಓದಿ :ಪ್ರಾಯೋಗಿಕವಾಗಿ ರೋಹಿತ್ ಫಿಟ್: ಕಣಕ್ಕಿಳಿಯುವ ಮುನ್ನ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕು ಎಂದ ಬಿಸಿಸಿಐ
ಲಂಕಾ ವಿರುದ್ಧವೇ ಎರಡು ಬಾರಿ ಡಬಲ್ ಸೆಂಚುರಿ ಸಿಡಿಸಿರುವ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಒಂದು ಡಬಲ್ ಸೆಂಚುರಿ ಗಳಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ಮೂರು ಡಬಲ್ ಸೆಂಚುರಿಗಳನ್ನು ಹೊಡೆದ ಏಕೈಕ ಬ್ಯಾಟ್ಸ್‌ಮನ್ ಇವರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ.