ETV Bharat / sports

ಭಾರತ ಕ್ರಿಕೆಟ್​ ತಂಡಕ್ಕೆ ಭದ್ರ ಬುನಾದಿ ಹಾಕಿದ 'ಸೂಪರ್​ ಜೋಡಿ'ಯ ಪದಾರ್ಪಣೆಗೆ 23 ವರ್ಷ! - ಲಾರ್ಡ್ಸ್​

ಭಾರತ ಕ್ರಿಕೆಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಇಬ್ಬರು 15ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತ ತಂಡದಲ್ಲಿ ಜೊತೆಯಾಗಿ ಆಡಿ ಹಲವು ಪ್ರತಿಭೆಗಳನ್ನು ಹುಟ್ಟು ಹಾಕಿದ್ದಲ್ಲದೇ, ಇಂದು ವಿಶ್ವದಲ್ಲಿ ಭಾರತ ತಂಡ ಬಲಿಷ್ಠವಾಗಿ ಬೆಳೆಯಲು ಕಾರಣವಾಗಿದ್ದಾರೆ.

ಗಂಗೂಲಿ ಹಾಗೂ ದ್ರಾವಿಡ್
author img

By

Published : Jun 20, 2019, 2:16 PM IST

Updated : Jun 20, 2019, 3:19 PM IST

ಮುಂಬೈ: ಲಾರ್ಡ್ಸ್​ ಅಂಗಳದಲ್ಲಿ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಇಂಗ್ಲೆಂಡ್​ ತಂಡಕ್ಕೆ ತಮ್ಮ ತೋಳ್ಬಲ ಪ್ರದರ್ಶನ ತೋರಿಸಿದ್ದ ಗಂಗೂಲಿ ಹಾಗೂ ದ್ರಾವಿಡ್ ಕ್ರಿಕೆಟ್​ ಜಗತ್ತಿಗೆ ಕಾಲಿಟ್ಟು ಇಂದಿಗೆ 23 ವರ್ಷಗಳು ಕಳೆದಿವೆ.

ಭಾರತ ಕ್ರಿಕೆಟ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಇಬ್ಬರು 15ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತ ತಂಡದಲ್ಲಿ ಜೊತೆಯಾಗಿ ಆಡಿ ಹಲವು ಪ್ರತಿಭೆಗಳನ್ನು ಹುಟ್ಟು ಹಾಕಿದ್ದಲ್ಲದೇ, ಇಂದು ವಿಶ್ವದಲ್ಲಿ ಭಾರತ ತಂಡ ಬಲಿಷ್ಠವಾಗಿ ಬೆಳೆಯಲು ಕಾರಣವಾಗಿದ್ದಾರೆ.

ಜೂನ್​ 20 1996 ರಂದು ಇಬ್ಬರು ಜೊತೆಯಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟರು. ಮೊದಲ ಪಂದ್ಯದಲ್ಲಿಯೇ ಕ್ರಿಕೆಟ್​ ಜನಕರನ್ನು ಕಾಡಿದ್ದ ಗಂಗೂಲಿ 131 ರನ್​ಗಳಿಸಿದರೆ, ದ್ರಾವಿಡ್​ 95 ರನ್​ಗಳಿಸಿದ್ದರು.

dravid-and-ganguly
ಗಂಗೂಲಿ ಹಾಗೂ ದ್ರಾವಿಡ್

ಭಾರತ ಕ್ರಿಕೆಟ್​ ತಂಡದ ಅತ್ಯುತ್ತಮ ನಾಯಕರೆಂದು ಹೆಸರು ಮಾಡಿರುವ ಸೌರವ್​ ಗಂಗೂಲಿ, 1999ರಲ್ಲಿ ತಂಡ ಫಿಕ್ಸಿಂಗ್​ ಅಪಖ್ಯಾತಿಗೆ ಒಳಗಾಗಿದ್ದ ಸಂದರ್ಭದಲ್ಲಿ ಭಾರತ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಅಷ್ಟೇ ಅಲ್ಲ ಬಲಿಷ್ಠ ತಂಡ ಕಟ್ಟಿದ ಹಿರಿಮೆ ಹೊಂದಿದ್ದಾರೆ. ಭಾರತ ತಂಡಕ್ಕೆ ಧೋನಿ,ಯುವರಾಜ್​, ಜಹೀರ್​ ಖಾನ್​, ಹರ್ಭಜನ್​​ ಸಿಂಗ್​ರಂತಹ ಹಲವಾರು ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿ ಭಾರತ ತಂಡವನ್ನು ಎಲ್ಲ ಮಾದರಿಯಲ್ಲೂ ಬಲಿಷ್ಠಗೊಳಿಸಿದ್ದರು.

ಇನ್ನು ಜಂಟಲ್​ ಮ್ಯಾನ್​ ಖ್ಯಾತಿಯ ದ್ರಾವಿಡ್ ಗಂಗೂಲಿ ಬೆನ್ನಿಗೆ ನಿಂತು ತಂಡದ ಉಪನಾಯಕನ ಜವಾಬ್ದಾರಿ ನಿರ್ವಹಿಸಿದ್ದರು.​​ ಭಾರತ ತಂಡದ ಪರ 16 ಕ್ಕೂ ಹೆಚ್ಚು ವರ್ಷಗಳ ಕಾಲ ಕ್ರಿಕೆಟ್​ ಆಡಿರುವ ದ್ರಾವಿಡ್​, ದಿ ವಾಲ್​ ಎಂದು ಹೆಸರು ಪಡೆದಿದ್ದಾರೆ. ಇವರು ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇನ್ನು ದಿ ವಾಲ್​ ಖ್ಯಾತಿಯ ದ್ರಾವಿಡ್​ ಪ್ರಸ್ತುತ ಅಂಡರ್​ 19 ವಿಭಾಗದ ಕೋಚ್​ ಆಗಿದ್ದು, ಭವಿಷ್ಯದ ಭಾರತ ತಂಡಕ್ಕೆ ಯುವ ಪೀಳಿಗೆಯನ್ನು ಸಜ್ಜುಗೊಳಿಸುತ್ತಿದ್ದಾರೆ.

ಒಟ್ಟಿನಲ್ಲಿ ದ್ರಾವಿಡ್​ - ಗಂಗೂಲಿ ತಮ್ಮ ವೃತ್ತಿ ಬದುಕು ಮುಗಿಸಿದ್ದಾರೆ. ಆದರೆ ಅವರು ಹಾದು ಹೋದ ಹಾದಿ ಮಾತ್ರ ಇನ್ನು ಅಳಿಸಿಹೋಗದೆ ಹಾಗೆ ಉಳಿದಿದೆ.

Intro:Body:Conclusion:
Last Updated : Jun 20, 2019, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.