ಮುಂಬೈ: ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 2005ರಲ್ಲಿ ಮುರಿದಿದ್ದ ಸುನಿಲ್ ಗವಾಸ್ಕರ್ ಅವರ ಹೆಚ್ಚು ಶತಕದ ದಾಖಲೆಗೆ ಇಂದಿಗೆ 14 ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂ ಹೆಚ್ಚು ಟೆಸ್ಟ್ ಶತಕದ ದಾಖಲೆ ಸಚಿನ್ ಹೆಸರಲ್ಲಿ ಮುಂದುವರಿದುಕೊಂಡು ಬಂದಿದೆ.
2005 ಡಿಸೆಂಬರ್ 10 ರಂದು ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ ಡೆಲ್ಲಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತದ ಹಿರಿಯ ಕ್ರಿಕೆಟರ್ ಸುನಿಲ್ ಗವಾಸ್ಕರ್(34ಶತಕ) ಅವರನ್ನು ಹಿಂದಿಕ್ಕಿ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
-
3️⃣5️⃣ x 💯 #OnThisDay in 2005, Sachin Tendulkar broke Sunil Gavaskar's record to become the leading centurion in Test history.
— ICC (@ICC) December 10, 2019 " class="align-text-top noRightClick twitterSection" data="
He slammed his 35th hundred in the format, surpassing a special milestone against Sri Lanka in Delhi 🙌 pic.twitter.com/zPZAGX0Mwf
">3️⃣5️⃣ x 💯 #OnThisDay in 2005, Sachin Tendulkar broke Sunil Gavaskar's record to become the leading centurion in Test history.
— ICC (@ICC) December 10, 2019
He slammed his 35th hundred in the format, surpassing a special milestone against Sri Lanka in Delhi 🙌 pic.twitter.com/zPZAGX0Mwf3️⃣5️⃣ x 💯 #OnThisDay in 2005, Sachin Tendulkar broke Sunil Gavaskar's record to become the leading centurion in Test history.
— ICC (@ICC) December 10, 2019
He slammed his 35th hundred in the format, surpassing a special milestone against Sri Lanka in Delhi 🙌 pic.twitter.com/zPZAGX0Mwf
ಅಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 14 ಬೌಂಡರಿ ಒಂದು ಸಿಕ್ಸರ್ ಸಿಡಿಸಿ 109 ರನ್ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ 188ರ ರನ್ಗಳಿಂದ ಗೆದ್ದು ಬೀಗಿತ್ತು.
1989 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಚಿನ್ ಒಟ್ಟು 200 ಟೆಸ್ಟ್ ಪಂದ್ಯಗಳಿಂದ 51 ಶತಕ ಸಿಡಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಇದಲ್ಲದೇ ಹೆಚ್ಚು ರನ್, ಹೆಚ್ಚು ಅರ್ಧಶತಕ, ಹೆಚ್ಚು ಏಕದಿನ ರನ್, ಏಕದಿನ ಶತಕ, ಅರ್ಧಶತಕದ ದಾಖಲೆಯೂ ಸಚಿನ್ ಹೆಸರಿನಲ್ಲಿಯೇ ಇದೆ.