ETV Bharat / sports

ಎಲ್ಲ ಪರಿಸ್ಥಿತಿಗಳನ್ನ ನಿಭಾಯಿಸುವನೇ ಟೆಸ್ಟ್​ ಬ್ಯಾಟ್ಸ್​ಮನ್, ಪಿಚ್​ ಬಗ್ಗೆ ಟೀಕೆ ಸಲ್ಲದು ಎಂದ ಬೆನ್​ ಸ್ಟೋಕ್ಸ್​ - ಭಾರತ vs ಇಂಗ್ಲೆಂಡ್ ಟೆಸ್ಟ್​ ನ್ಯೂಸ್

ನವೀಕರಣಗೊಂಡಿರುವ ಮೊಟೆರಾ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಡೇ ಅಂಡ್​ ನೈಟ್​ ಟೆಸ್ಟ್​ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ , ಟೆಸ್ಟ್​ ಬ್ಯಾಟ್ಸ್​ಮನ್​ ಪಿಚ್​ಗಳ ಬಗ್ಗೆ ಆಲೋಚಿಸಬಾರದು, ಎಲ್ಲ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಆಡಬೇಕೆಂದು ತಿಳಿಸಿದ್ದಾರೆ.

ಭಾರತೀಯ ಪಿಚ್​ ಬಗ್ಗೆ ಬೆನ್​ ಸ್ಟೋಕ್ಸ್​ ಹೇಳಿಕೆ

author img

By

Published : Feb 22, 2021, 12:57 PM IST

ಅಹ್ಮದಾಬಾದ್​: ಭಾರತದಲ್ಲಿ ಸ್ಪಿನ್ - ಸ್ನೇಹಿ ಪಿಚ್‌ಗಳ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ಬದಿಗೊತ್ತಿರುವ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಟೆಸ್ಟ್ ಆಟಗಾರರು ಎಲ್ಲ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಪ್ರವೀಣರಾಗಿರಬೇಕು ಎಂದು ಹೇಳುವ ಮೂಲಕ ಪಿಚ್​ ಬಗ್ಗೆ ಯಾವುದೇ ಟೀಕೆ ಸಲ್ಲದು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನವೀಕರಣಗೊಂಡಿರುವ ಮೊಟೆರಾ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಡೇ ಅಂಡ್​ ನೈಟ್​ ಟೆಸ್ಟ್​ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ , ಟೆಸ್ಟ್​ ಬ್ಯಾಟ್ಸ್​ಮನ್​ ಪಿಚ್​ಗಳ ಬಗ್ಗೆ ಆಲೋಚಿಸಬಾರದು, ಎಲ್ಲ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಆಡಬೇಕು ಎಂದು ತಿಳಿಸಿದ್ದಾರೆ.

"ಟೆಸ್ಟ್​ ಬ್ಯಾಟ್ಸ್​ಮನ್​ನ ಪ್ರಮುಖ ಲಕ್ಷಣ ಎಂದರೆ, ನೀವು ವಿಭಿನ್ನ ರೀತಿಯ ಪರಿಸ್ಥಿತಿಗಳನ್ನು ಎದುರಿಸಲು ಸಮರ್ಥನಾಗಿರಬೇಕು. ಸಾಗರೋತ್ತರ ಬ್ಯಾಟ್ಸ್​ಮನ್​ಗಳಿಗೆ ಬಂದು ಯಶಸ್ವಿಯಾಗಲು ಅತ್ಯಂತ ಕಠಿಣವಾದ ಸ್ಥಳಗಳಲ್ಲಿ ಭಾರತವೂ ಒಂದು. ಅದು ಇಂಗ್ಲೆಂಡ್​​ಗೂ ಕೂಡ. ಇದು ಆಟದ ಒಂದು ಭಾಗ, ಇಂತಹ ಸವಾಲುಗಳನ್ನು ನಾವು ಪ್ರೀತಿಸುತ್ತೇವೆ" ಎಂದು ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಸ್ಟೋಕ್ಸ್​ ತಿಳಿಸಿದ್ದಾರೆ.

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಭಾರತೀಯ ಹೆಚ್ಚು ತಿರುವು ಪಡೆಯುವ ಪಿಚ್​ಗಳು ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಹೆಚ್ಚು ಚರ್ಚೆಗೀಡಾಗುತ್ತಿದೆ. ಇಂಗ್ಲೆಂಡ್‌ನ ಮಾಜಿ ಆಟಗಾರರಾದ ಮೈಕೆಲ್ ವಾನ್ ಟೆಸ್ಟ್ ಕ್ರಿಕೆಟ್‌ಗೆ ಇಂತಹ ಪಿಚ್​ಗಳು ಸೂಕ್ತವಾದುದಾಗಿದೆಯೇ ಎಂದು ಪ್ರಶ್ನಿಸಿದ್ದರು.

ಎರಡನೇ ಪಂದ್ಯದಲ್ಲಿ ನಾನು ಹೆಚ್ಚು ಓವರ್​ ಬೌಲ್ ಮಾಡಲಿಲ್ಲ ಎಂಬ ಅಂಶವನ್ನು ಹೆಚ್ಚು ಮಾತನಾಡುವುದು ಬೇಡ, ಅದು ಹಸಿರು ಪಿಚ್​ ಆಗಿದ್ದರೆ ನಾನು ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡುತ್ತಿದ್ದೆ. ಆದರೆ, ಡೇ ಅಂಡ್​ ನೈಟ್ ಪಂದ್ಯದಲ್ಲಿ ನಾನು ಲೈಟ್​ಗಳ ಕೆಳಗೆ ಬೌಲಿಂಗ್​ ಮಾಡಬಹುದು ಎಂದು ಭಾವಿಸಿದ್ದೇನೆ. ಇದು ತಂಡಕ್ಕೆ ಅನುಕೂಲ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ತವರಿನ ತಂಡ ತನಗೆ ಬೇಕಾದಂತೆ ಪಿಚ್​ ಸಿದ್ಧಪಡಿಸಿಕೊಳ್ಳುವುದು ಹೊಸದೇನಲ್ಲ; ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.