ETV Bharat / sports

ರಹಾನೆ - ಕೊಹ್ಲಿ ಭಾರತೀಯರು, ಇಬ್ಬರ ಮಧ್ಯೆ ಹೋಲಿಕೆ ಮಾಡುವುದು ಬೇಡ : ಸಚಿನ್​ - ಕ್ರಿಕೆಟ್ 2020

ವಿರಾಟ್​ ಕೊಹ್ಲಿ ವೈಯಕ್ತಿಕವಾಗಿಯೂ ವೈಫಲ್ಯ ಅನುಭವಿಸಿದ್ದಾರೆ. ಅವರು 2020ರಲ್ಲಿ ಒಂದು ಶತಕವನ್ನೂ ಸಿಡಿಸಿಲ್ಲ. ಹೀಗಿರುವಾಗ ಅಜಿಂಕ್ಯ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕೊಹ್ಲಿ ಬದಲಿಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ತಂಡಕ್ಕೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಮೆಲ್ಬೋರ್ನ್​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ರಹಾನೆಯನ್ನು ಖಾಯಂ ಟೆಸ್ಟ್​ ನಾಯಕನನ್ನಾಗಿ ನೇಮಿಸಬೇಕೆಂದು ಎಂಬ ಚರ್ಚೆ ನಡೆಯುತ್ತಿದೆ.

ರಹಾನೆ-ಕೊಹ್ಲಿ
ರಹಾನೆ-ಕೊಹ್ಲಿ
author img

By

Published : Dec 31, 2020, 5:05 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ 2020 ಸಾಧಾರಣ ವರ್ಷವಾಗಿದೆ. ಅವರು ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​ ಸರಣಿ ಸೋಲು, ಐಪಿಎಲ್​ನಲ್ಲಿ ಫೈನಲ್​ ತಲುಪಲು ವಿಫಲವಾಗಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧವೂ ಏಕದಿನ ಸರಣಿ ಸೋಲು ಕಂಡಿರುವುದರಿಂದ ಅವರ ನಾಯಕತ್ವದ ಮೇಲೆ ಟೀಕೆಗಳು ಕೇಳಿ ಬರುತ್ತಿದೆ.

ವಿರಾಟ್​ ಕೊಹ್ಲಿ ವೈಯಕ್ತಿಕವಾಗಿಯೂ ವೈಫಲ್ಯ ಅನುಭವಿಸಿದ್ದಾರೆ. ಅವರು 2020ರಲ್ಲಿ ಒಂದು ಶತಕವನ್ನೂ ಸಿಡಿಸಿಲ್ಲ. ಹೀಗಿರುವಾಗ ಅಜಿಂಕ್ಯ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕೊಹ್ಲಿ ಬದಲಿಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ತಂಡಕ್ಕೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಮೆಲ್ಬೋರ್ನ್​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ರಹಾನೆಯನ್ನು ಖಾಯಂ ಟೆಸ್ಟ್​ ನಾಯಕನನ್ನಾಗಿ ನೇಮಿಸಬೇಕೆಂದು ಎಂಬ ಚರ್ಚೆ ನಡೆಯುತ್ತಿದೆ,

ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದಾರೆ. ಅವರು ನೇತೃತ್ವದಲ್ಲಿ ಭಾರತ ಆಡಿರುವ 56 ಟೆಸ್ಟ್​ ಪಂದ್ಯಗಳಲ್ಲಿ 33 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಆದರೂ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಚರ್ಚೆ ಹಚ್ಚಾಗುತ್ತಿದೆ.

ಇದನ್ನು ಓದಿ:ಏಕದಿನ ಶ್ರೇಯಾಂಕದಲ್ಲಿ ಸತತ ನಾಲ್ಕನೇ ವರ್ಷವೂ ಕಿಂಗ್ ಕೊಹ್ಲಿ ನಂ.​ 1

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್​ನ ಲೆಜೆಂಡ್​, ಸಚಿನ್ ತೆಂಡೂಲ್ಕರ್​, ಯಾವುದೇ ವ್ಯಕ್ತಿ ದೇಶಕ್ಕಿಂತ ದೊಡ್ಡವರಲ್ಲ ಎಂದು ಹೇಳಿದ್ದಾರೆ.

ಜನರು ವಿರಾಟ್​ರೊಂದಿಗೆ ಹೋಲಿಕೆ ಮಾಡಬಾರದು. ಅಜಿಂಕ್ಯ(ರಹಾನೆ) ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಉದ್ದೇಶ ಆಕ್ರಮಣಕಾರಿಯಾಗಿರುತ್ತದೆ. ಅವರಿಬ್ಬರು ಭಾರತೀಯರು ಮತ್ತು ಪ್ರತಿಯೊಬ್ಬರು ಆಡುವುದು ದೇಶಕ್ಕಾಗಿ ಎಂದು ನೆನಪಿಸಲು ನಾನು ಬಯಸುತ್ತೇನೆ. ಆದ್ದರಿಂದ ಇಲ್ಲಿ ಯಾವುದೇ ವ್ಯಕ್ತಿ ಭಾರತಕ್ಕಿಂತ ಮೇಲಲ್ಲ. ತಂಡ ಮತ್ತು ದೇಶ ಎಲ್ಲಕಿಂತ ಮೇಲಿರುತ್ತದೆ" ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.