ETV Bharat / sports

ಅದು ವಿಶ್ವದ ನಂಬರ್​​ ಒನ್​​ ಟೀಂ... ಏಕದಿನ ಸರಣಿ ಅಷ್ಟೊಂದು ಸುಲಭವಾಗಿ ಕೈಚೆಲ್ಲಲ್ಲ: ಗಪ್ಟಿಲ್​

ಟೀಂ ಇಂಡಿಯಾ ವಿರುದ್ಧ ನಾಳೆ ಎರಡನೇ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಕಿವೀಸ್​ ತಂಡದ ಬ್ಯಾಟ್ಸ್​​​ಮನ್​​​ ಮಾತನಾಡಿದ್ದಾರೆ.

Martin Guptill
Martin Guptill
author img

By

Published : Feb 7, 2020, 2:34 PM IST

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​-ಟೀಂ ಇಂಡಿಯಾ ನಡುವೆ ಇದೀಗ ಏಕದಿನ ಕ್ರಿಕೆಟ್​ ಸರಣಿ ನಡೆಯುತ್ತಿದ್ದು, ಮೂದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಇದೇ ವಿಚಾರವಾಗಿ ಕಿವೀಸ್​ ತಂಡದ ಆರಂಭಿಕ ಆಟಗಾರ ಮಾರ್ಟಿನ್​ ಗಪ್ಟಿಲ್​​ ಮಾತನಾಡಿದ್ದಾರೆ.

ನಾಳೆ ಟೀಂ ಇಂಡಿಯಾ ವಿರುದ್ಧ ನ್ಯೂಜಿಲ್ಯಾಂಡ್​ ಎರಡನೇ ಏಕದಿನ ಪಂದ್ಯದಲ್ಲಿ ಭಾಗಿಯಾಗಲಿದ್ದು, ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆ ಈ ಪಂದ್ಯದಲ್ಲೇ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ತಂಡ ಹೊಸ ಯೋಜನೆ ಜತೆ ಮೈದಾನಕ್ಕಿಳಿಯಲಿದ್ದು, ಗೆಲುವಿನ ಪ್ಲಾನ್​ ರೂಪಿಸಿಕೊಂಡಿದೆ.

ನಾಳೆಯ ಪಂದ್ಯದ ಬಗ್ಗೆ ಮಾತನಾಡಿರುವ ಕಿವೀಸ್​ ಪ್ಲೇಯರ್​, ಟೀಂ ಇಂಡಿಯಾ ವಿಶ್ವದ ನಂಬರ್​​ ಒನ್​ ತಂಡವಾಗಿದೆ. ಅಷ್ಟೊಂದು ಸುಲಭವಾಗಿ ಸರಣಿ ಕೈಚೆಲ್ಲುವುದಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಅವರನ್ನ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮೊದಲನೇ ಏಕದಿನ ಪಂದ್ಯದಲ್ಲಿ ನಮ್ಮ ಬ್ಯಾಟ್ಸ್​​​​​ಮನ್​ ​ಗಳಿಂದ ಉತ್ತಮ ಜೊತೆಯಾಟ ಮೂಡಿ ಬಂದ ಕಾರಣ ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಗೆಲುವಿನ ಹುಮ್ಮಸ್ಸು ಮುಂದುವರಿಸಲುವ ಇರಾದೆ ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮುಕ್ತಾಯಗೊಂಡಿರುವ ಐದು ಟಿ-20 ಕ್ರಿಕೆಟ್​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 5-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದ್ದು, ಏಕದಿನ ಕ್ರಿಕೆಟ್​ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆ ಪಡೆದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.