ETV Bharat / sports

ಭಾರತ ಕ್ರಿಕೆಟ್​​ ತಂಡದಲ್ಲಿ ತಾರತಮ್ಯ: ಕೊಹ್ಲಿ - ನಟರಾಜನ್​ ಉಲ್ಲೇಖಿಸಿ ಗವಾಸ್ಕರ್​ ಶಾಕಿಂಗ್ ಹೇಳಿಕೆ

author img

By

Published : Dec 23, 2020, 9:18 PM IST

Updated : Dec 23, 2020, 9:27 PM IST

ಸೀಮಿತ ಓವರ್​ಗಳ ಭಾಗವಾಗಿದ್ದ ನಟರಾಜನ್​ರನ್ನು ಟೆಸ್ಟ್​ ಸರಣಿಯಲ್ಲಿ ಬ್ಯಾಟ್ಸ್​ಮನ್​ಗೆ ಬೌಲಿಂಗ್ ಮಾಡಲು ನೆಟ್​ ಬೌಲರ್ ​ಆಗಿ ಉಳಿಸಿಕೊಳ್ಳಲಾಗಿದೆ. ಆತ ತನ್ನ ಮಗು ಹುಟ್ಟಿ 2 ತಿಂಗಳಾದರೂ ಇನ್ನು ಮುಖವನ್ನೇ ನೋಡಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

Gavaskar
ಸುನೀಲ್ ಗವಾಸ್ಕರ್​

ಹೈದರಾಬಾದ್​: ಭಾರತ ತಂಡದಲ್ಲಿ ಆರ್​.ಅಶ್ವಿನ್​ ಮತ್ತು ಟಿ.ನಟರಾಜನ್​ ಅವರಂತಹ ಬೌಲರ್​ಗಳಿಗೆ ನೀಡುವ ಗೌರವ ಪಕ್ಷಪಾತವಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್​ ಭಾರತ ತಂಡದಲ್ಲಿ ವಿಭಜನೆಯಾಗುವ ಮುನ್ಸೂಚನೆ ನೀಡಿದ್ದಾರೆ.

ರವಿಚಂದ್ರನ್​​ ಅಶ್ವಿನ್ ನೇರ ಮತ್ತು ಪ್ರಾಮಾಣಿಕತೆಯಿಂದಿರುವುದಕ್ಕೆ ಭಾರತದ ತಂಡದೊಳಗೆ ಬಳಲುತ್ತಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ. ಜೊತೆಗೆ ಐಪಿಎಲ್ ಪ್ಲೇ ಆಫ್ ಸಮಯದಲ್ಲಿ ತಮ್ಮ ಮೊದಲ ಮಗುವಿನ ತಂದೆಯಾದ ಟಿ.ನಟರಾಜನ್ ಇನ್ನೂ ತಮ್ಮ ಮಗಳನ್ನು ನೋಡಲಾಗಿಲ್ಲ. ಆದರೆ ಜನವರಿಯಲ್ಲಿ ತಮ್ಮ ಮೊದಲ ಮಗುವಿನ ಜನನದ ವೇಳೆ ತಾವು ಹಾಜರಿರಲು ಆಸ್ಟ್ರೇಲಿಯಾ ಪ್ರವಾಸದಿಂದ ಹೊರಹೋಗಲು ಅನುಮತಿ ಪಡೆದ ಭಾರತದ ನಾಯಕ ವಿರಾಟ್ ಕೊಹ್ಲಿ ವಿರುದ್ಧವೂ ಸಹ ಗವಾಸ್ಕರ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೀಮಿತ ಓವರ್​ಗಳ ಭಾಗವಾಗಿದ್ದ ನಟರಾಜನ್​ರನ್ನು ಟೆಸ್ಟ್​ ಸರಣಿಯಲ್ಲಿ ಬ್ಯಾಟ್ಸ್​ಮನ್​ಗೆ ಬೌಲಿಂಗ್ ಮಾಡಲು ನೆಟ್​ ಬೌಲರ್ ​ಆಗಿ ಉಳಿಸಿಕೊಳ್ಳಲಾಗಿದೆ. ಆತ ತನ್ನ ಮಗು ಹುಟ್ಟಿ 2 ತಿಂಗಳಾದರೂ ಇನ್ನು ಮುಖವನ್ನೇ ನೋಡಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

ನಟರಾಜನ್​
ನಟರಾಜನ್​

ನಟರಾಜನ್​​ ಹೊಸ ಆಟಗಾರನಾಗಿರುವುದರಿಂದ ಆತ ಹೆಚ್ಚು ಸದ್ದು ಮಾಡಲು ಆಗುತ್ತಿಲ್ಲ. ಅವರು ಟಿ-20ಗೆ ಅದ್ಭುತವಾಗಿ ಪದಾರ್ಪಣೆ ಮಾಡಿದ್ದರು. ಯಾರ್ಕರ್​ ಕಿಂಗ್ ಎನಿಸಿಕೊಂಡಿದ್ದ ಅವರಿಗೆ ಹಾರ್ದಿಕ್​ ಪಾಂಡ್ಯ ತಮ್ಮ ಪಾಲಿನ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಧೈರ್ಯವಾಗಿ ಅರ್ಪಿಸಿದರು. ನಟರಾಜನ್​ರನ್ನು ಯುಎಇಯಿಂದ ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲಾಗಿತ್ತು. ನಂತರ ಟಿ-20 ಮತ್ತು ಏಕದಿನ ಕ್ರಿಕೆಟ್​ನ ಭಾಗವಾದರು. ಆದರೆ ಸೀಮಿತ ಸರಣಿ ಮುಗಿದರೂ ಅವರನ್ನು ಟೆಸ್ಟ್​ ಸರಣಿಗಾಗಿ ನೆಟ್​ ಬೌಲರ್​ ಆಗಿ ಉಳಿಸಿಕೊಳ್ಳಲಾಗಿದೆ. ನೀವೇ ಇದನ್ನು ಊಹಿಸಿಕೊಳ್ಳಿ ಎಂದು ತಂಡದಲ್ಲಿನ ತಾರತಮ್ಯದ ಬಗ್ಗೆ ವಿವರಿಸಿದ್ದಾರೆ.

ಒಂದು ಫಾರ್ಮ್ಯಾಟ್​ನ ಮ್ಯಾಚ್​ ವಿನ್ನರ್​​ಅನ್ನು ಮತ್ತೊಂದು ಫಾರ್ಮ್ಯಾಟ್​ ಕ್ರಿಕೆಟ್​ನ ಕೇವಲ ನೆಟ್​ ಬೌಲರ್​ ಆಗಿರಲು ಹೇಳಲಾಗಿದೆ. ಅವರು ತವರಿಗೆ ಈ ಸರಣಿ ಮುಗಿದ ಬಳಿಕ ಜನವರಿ ಮೂರನೇ ವಾರದಲ್ಲಿ ಹಿಂತಿರುಗುತ್ತಾರೆ. ಆದರೆ ನಾಯಕ ಮೊದಲ ಮಗುವಿನ ಜನನದ ಸಂದರ್ಭದಲ್ಲಿರಲು ಸರಣಿಯ ಮೊದಲ ಟೆಸ್ಟ್​ನ ನಂತರವೇ ಮನೆಗೆ ಹಿಂತಿರುಗುತ್ತಾನೆ. ಇದು ಭಾರತೀಯ ಕ್ರಿಕೆಟ್. ವಿಭಿನ್ನ ಕ್ರಿಕೆಟಿಗರಿಗೆ ವಿಭಿನ್ನ ನಿಯಮಗಳು. ನೀವು ನನ್ನ ಮಾತನ್ನು ನಂಬದಿದ್ದರೆ ಆರ್​.ಅಶ್ವಿನ್​ ಮತ್ತು ನಟರಾಜನ್​ರನ್ನು ಕೇಳಿ ಎಂದು ಅವರು ಮಾಧ್ಯಮವೊಂದಕ್ಕೆ ಬರೆದ ಲೇಖನದಲ್ಲಿ ಬರೆದಿದ್ದಾರೆ.

ರವಿಚಂದ್ರನ್​ ಅಶ್ವಿನ್
ರವಿಚಂದ್ರನ್​ ಅಶ್ವಿನ್

ಇನ್ನು ಅನುಭವಿ ಆಶ್ವಿನ್​ ಬಗ್ಗೆಯೂ ಲೇಖನದಲ್ಲಿ ಉಲ್ಲೇಖ ಮಾಡಿದ್ದು, ಅಶ್ವಿನ್​ ಬೌಲಿಂಗ್​ ಸಾಮರ್ಥ್ಯಕ್ಕಿಂತ ಹೆಚ್ಚು ನೇರವಾಗಿ ಮಾತನಾಡುವುದರಿಂದಲೇ ಹೆಚ್ಚು ಸಮಸ್ಯೆ ಎದುರಿಸಿದ್ದಾರೆ. ಸಭೆಗಳಲ್ಲಿ ಅವರು ಮಾತನಾಡುವುದನ್ನು ಇತರರು ಒಪ್ಪಿಕೊಳ್ಳುವುದಿಲ್ಲ. ಆದರೆ ಇತರರು ಇಷ್ಟವಿಲ್ಲದಿದ್ದರೂ ಸುಮ್ಮನೆ ತಲೆಯಾಡಿಸುತ್ತಾರೆ.

"ಯಾವುದೇ ದೇಶವು 350ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ ಮತ್ತು ನಾಲ್ಕು ಟೆಸ್ಟ್ ಶತಕಗಳನ್ನು ಹೊಂದಿರುವ ಬೌಲರ್‌ನನ್ನು ಸದಾ ಸ್ವಾಗತಿಸುತ್ತದೆ. ಆದಾಗ್ಯೂ ಅಶ್ವಿನ್ ಒಂದು ಪಂದ್ಯದಲ್ಲಿ ಹೆಚ್ಚು ವಿಕೆಟ್‌ಗಳನ್ನು ತೆಗೆದುಕೊಳ್ಳದಿದ್ದರೆ ಅವರು ಮುಂದಿನ ಪಂದ್ಯದಿಂದ ಹೊರಗುಳಿಯುತ್ತಾರೆ. ಆದರೆ ಬ್ಯಾಟ್ಸ್‌ಮನ್‌ಗಳಿಗೆ ಹಾಗಾಗುವುದಿಲ್ಲ. ಅವರು ಒಂದು ಪಂದ್ಯದಲ್ಲಿ ವಿಫಲವಾದರೂ ಅವರಿಗೆ ಮತ್ತೊಂದು ಅವಕಾಶ ಸಿಗುತ್ತದೆ. ಆದರೆ ಅಶ್ವಿನ್‌ಗೆ ಮಾತ್ರ ನಿಯಮಗಳು ವಿಭಿನ್ನವಾಗಿ ತೋರುತ್ತವೆ" ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

Last Updated : Dec 23, 2020, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.