ETV Bharat / sports

ಕೆಲವು ಸಂದರ್ಭದಲ್ಲಿ ರನ್ ​ಗಳಿಸುವುದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸುವುದು ಮುಖ್ಯ: ಪೂಜಾರ

2018ರ ಪ್ರವಾಸದಲ್ಲಿ ಚೇತೇಶ್ವರ್ ಪೂಜಾರ 44.41ರ ಸ್ಟೈಕ್ ​ರೇಟ್​ನಲ್ಲಿ 521 ರನ್ ​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ ಪ್ರಸ್ತುತ ಪ್ರವಾಸದಲ್ಲಿ 29.20 ಸರಾಸರಿಯಲ್ಲಿ 271 ರನ್ ​ಗಳಿಸಿದ್ದರು. ಆದರೆ ಟೀಮ್ ಇಂಡಿಯಾ ಆಟಗಾರ ಈ ಎರಡು ಸರಣಿಗಳಲ್ಲಿ ತಮ್ಮ ಪ್ರಯತ್ನವನ್ನು ಸಮಾನವಾಗಿ ಪರಿಗಣಿಸುತ್ತೇನೆಂದು ತಿಳಿಸಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ
author img

By

Published : Jan 31, 2021, 7:30 PM IST

ನವದೆಹಲಿ: ಕೆಲವೊಂದು ಸಮಯದಲ್ಲಿ ನಾವು ರನ್​ ಗಳಿಸುವುದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸುವುದೇ ಪ್ರಮುಖ ವಿಷಯವಾಗುತ್ತದೆ ಎಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಲೋ ಸ್ಟ್ರೈಕ್​ ರೇಟ್​ನಿಂದ ಟೀಕೆಗೆ ಗುರಿಯಾಗಿದ್ದ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

2018ರ ಪ್ರವಾಸದಲ್ಲಿ ಚೇತೇಶ್ವರ್ ಪೂಜಾರ 44.41ರ ಸ್ಟೈಕ್ ​ರೇಟ್​ನಲ್ಲಿ 521 ರನ್​ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಆದರೆ ಪ್ರಸ್ತುತ ಪ್ರವಾಸದಲ್ಲಿ 29.20 ಸರಾಸರಿಯಲ್ಲಿ 271 ರನ್​ ಗಳಿಸಿದ್ದರು. ಆದರೆ ಟೀಮ್ ಇಂಡಿಯಾ ಆಟಗಾರ ಈ ಎರಡು ಸರಣಿಗಳಲ್ಲಿ ತಮ್ಮ ಪ್ರಯತ್ನವನ್ನು ಸಮಾನವಾಗಿ ಪರಿಗಣಿಸುತ್ತೇನೆಂದು ತಿಳಿಸಿದ್ದಾರೆ.

"ಈ ಎರಡೂ ಪ್ರವಾಸಗಳು ತಂಡಕ್ಕೆ ಅದ್ಭುತವಾಗಿದ್ದವು. ವೈಯಕ್ತಿಕವಾಗಿ ನಾನು ಎರಡೂ ಪ್ರವಾಸಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಪರಿಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಸುದೀರ್ಘ ಪ್ರವಾಸದ ನಂತರ ಸುಮಾರು 8 ತಿಂಗಳ ಬಳಿಕ ನಾನು ಕ್ರಿಕೆಟ್ ಪುನಾರಂಭಿಸಿದ್ದೆ. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್​ ಸಹ ಇರಲಿಲ್ಲ" ಎಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಬಯೋ ಬಬಲ್​ ಸೇರುವ ಮುನ್ನ ಪೂಜಾರ ಪಿಟಿಐಗೆ ತಿಳಿಸಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

ಸರಣಿ ಪೂರ್ತಿ ಆಸ್ಟ್ರೇಲಿಯಾ ಬೌಲಿಂಗ್​ ದಾಳಿಯ ಮುಂದೆ ಬಂಡೆಯಂತೆ ನಿಂತಿದ್ದ ಪೂಜಾರ, ಹಲವಾರು ಬಾರಿ ಪೆಟ್ಟು ತಿಂದಿದ್ದರು. ಅದರಲ್ಲೂ ಸರಣಿ ನಿರ್ಣಾಯಕವಾಗಿದ್ದ ಬ್ರಿಸ್ಬೇನ್​ ಟೆಸ್ಟ್​ ಪಂದ್ಯದಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡಲು ಅನೇಕ ಹೊಡೆತಗಳನ್ನು ತಿಂದಿದ್ದರು.

"ದೀರ್ಘ ವಿಶ್ರಾಂತಿ ಬಳಿಕ ನಮಗೆ ತಯಾರಿಯ ವಿಷಯ ಅಷ್ಟು ಸುಲಭವಾಗಿರಲಿಲ್ಲ. ಆಸ್ಟ್ರೇಲಿಯಾ ನಮ್ಮ ಎಲ್ಲಾ ಆಟಗಾರರಿಗೂ ಸಂಪೂರ್ಣ ಆಟದ ಯೋಜನೆ ಹೊಂದಿತ್ತು. ಲಯಕ್ಕೆ ಮರಳಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ಅದೃಷ್ಟವಶಾತ್ ಎಲ್ಲರೂ ಪಾಸಿಟಿವ್​ ಆಗಿ ಹೋದೆವು" ಎಂದು ಪೂಜಾರ ತಿಳಿಸಿದ್ದಾರೆ.

"ಅಂಕಿ-ಸಂಖ್ಯೆಗಳ ಪ್ರಕಾರ, ಇದು ನನಗೆ ತುಂಬಾ ಉತ್ತಮವಾದ ಸರಣಿಯಂತೆ ಕಾಣಿಸದೇ ಇರಬಹುದು. ಆದರೆ ನೀವು ಪಿಚ್‌ಗಳನ್ನು ನೋಡಿದರೆ ಈ ಬಾರಿ ಹೆಚ್ಚಿನ ರನ್ ಗಳಿಸುವುದು ಕಷ್ಟವಾಗಿತ್ತು. ಈ ಸರಣಿ ಕಳೆದ ಬಾರಿಗಿಂತ ಹೆಚ್ಚು ಸವಾಲಿನ ಸಂಗತಿಯಾಗಿತ್ತು" ಎಂದಿದ್ದಾರೆ.

ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ

ಸ್ಟ್ರೈಕ್​ ರೇಟ್​ ಬಗ್ಗೆ ಮಾತನಾಡಿದ ಪೂಜಾರ, "ಕೆಲವೊಮ್ಮೆ ಹೆಚ್ಚು ರನ್ ​ಗಳಿಸುವುದಕ್ಕಿಂತಲೂ ಹೆಚ್ಚು ಎಸೆತಗಳನ್ನಾಡುವುದು ಮುಖ್ಯವಾಗಿರುತ್ತದೆ. ಇಲ್ಲಿ ಸ್ಟ್ರೈಕ್​ ರೇಟ್​ ಅಷ್ಟೇನೂ ಮುಖ್ಯವಾಗಿರಲಿಲ್ಲ. ತಂಡದಲ್ಲಿ ಪ್ರತಿಯೊಬ್ಬ ಬ್ಯಾಟ್ಸ್​ಮನ್​ಗೂ ಒಂದೊಂದು ಪಾತ್ರವಿರುತ್ತದೆ. ತಂಡದ ಆಡಳಿತ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುತ್ತದೆ. ಅದು ರವಿ ಭಾಯ್​, ವಿಕ್ಕಿ ಭಾಯ್ ಅಥವಾ ಅಜಿಂಕ್ಯ ರಹಾನೆ ಆಗಿರಲಿ, ಅವರು ನಾನು ಬ್ಯಾಟಿಂಗ್ ಮಾಡುವ ರೀತಿಯಲ್ಲೇ ಮುಂದುವರಿಯಲು ಹೇಳಿದ್ದರು" ಎಂದು ತಮ್ಮ ನಿಧಾನಗತಿ ಬ್ಯಾಟಿಂಗ್​ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ:ವಿಶ್ವಶ್ರೇಷ್ಠ ವಿರಾಟನಿಗೆ ವೀಕ್​ನೆಸ್​ ಎಂಬುದೇ ಇಲ್ಲ, ಔಟ್ ಮಾಡುವುದೇಗೆ? : ಮೋಯಿನ್ ಅಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.