ಮುಂಬೈ: ಕೊರೊನಾ ವಿರುದ್ಧ ಹೋರಾಟಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗಾಗಲೇ 50 ಲಕ್ಷ ರೂ ದೇಣಿಗೆ ನೀಡಿದ್ದು, ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಇದೀಗ ಪ್ರತಿ ತಿಂಗಳು 5 ಸಾವಿರ ಜನರಿಗೆ ಊಟ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದಾಯ ರಹಿತ ಸಂಸ್ಥೆ ಅಪ್ನಾಲಯದ ಮೂಲಕ ಈ ಕೆಲಸ ಮಾಡಲು ಕ್ರಿಕೆಟ್ ದಂತಕಥೆ ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಈಗಾಗಲೇ ಅಪ್ನಾಲಯ್ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದು, ಪ್ರತಿ ತಿಂಗಳು ನೀವು ನೀಡುವ ರೇಷನ್ 5 ಸಾವಿರ ಜನರಿಗೆ ತಲುಪಿಸುವ ಕೆಲಸ ನಮ್ಮದು ಎಂದಿದೆ.
-
My best wishes to @ApnalayaTweets to continue your work in the service of the distressed and needy. Keep up your good work.🙏🏻 https://t.co/1ZPVLK7fFb
— Sachin Tendulkar (@sachin_rt) April 9, 2020 " class="align-text-top noRightClick twitterSection" data="
">My best wishes to @ApnalayaTweets to continue your work in the service of the distressed and needy. Keep up your good work.🙏🏻 https://t.co/1ZPVLK7fFb
— Sachin Tendulkar (@sachin_rt) April 9, 2020My best wishes to @ApnalayaTweets to continue your work in the service of the distressed and needy. Keep up your good work.🙏🏻 https://t.co/1ZPVLK7fFb
— Sachin Tendulkar (@sachin_rt) April 9, 2020
ಸಚಿನ್ ತೆಂಡೂಲ್ಕರ್ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದ್ದಾರೆ.
ಇದರ ಜತೆಗೆ ಸಚಿನ್ ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.