ETV Bharat / sports

ಕೊಹ್ಲಿ ಬಳಗಕ್ಕೂ ಕಾಡಿದ ಉಗ್ರರ ದಾಳಿ ಭೀತಿ... ಭದ್ರತೆ ಹೆಚ್ಚಳ

ಪಾಕಿಸ್ತಾನ ಕ್ರಿಕೆಟ್ ಬೋರ್ಡ್​(ಪಿಸಿಬಿ)ಗೆ ಅನಾಮಧೇಯ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ ಬಳಗದ ಮೇಲೆ ಉಗ್ರ ದಾಳಿ ಸಾಧ್ಯತೆ ಇದೆ ಎಂದು ಮೇಲ್ ಮಾಡಿದ್ದ. ಪಿಸಿಬಿ ಈ ಮಾಹಿತಿಯನ್ನು ಐಸಿಸಿ ಮೂಲಕ ಬಿಸಿಸಿಐಗೆ ರವಾನಿಸಿತ್ತು.

ಕೊಹ್ಲಿ ಬಳಗಕ್ಕೂ ಕಾಡಿದ ಉಗ್ರದಾಳಿ ಭೀತಿ
author img

By

Published : Aug 19, 2019, 8:01 AM IST

ಹೈದರಾಬಾದ್: ಕಾಶ್ಮೀರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ಇದೇ ಬಿಸಿ ಇದೀಗ ದೂರದ ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೂ ತಟ್ಟಿದೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್​(ಪಿಸಿಬಿ)ಗೆ ಅನಾಮಧೇಯ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ ಬಳಗದ ಮೇಲೆ ಉಗ್ರ ದಾಳಿ ಸಾಧ್ಯತೆ ಇದೆ ಎಂದು ಮೇಲ್ ಮಾಡಿದ್ದ. ಪಿಸಿಬಿ ಈ ಮಾಹಿತಿಯನ್ನು ಐಸಿಸಿ ಮೂಲಕ ಬಿಸಿಸಿಐಗೆ ರವಾನಿಸಿತ್ತು.

ಮೇಲ್​ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಅದೊಂದು ಹುಸಿ ಮೇಲ್​​​ ಎನ್ನುವುದು ಸ್ಪಷ್ಟವಾಗಿದೆ. ಆದರೆ ಈ ಸಂದೇಶ ತಲುಪಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಪಿಸಿಬಿಗೆ ಬಂದ ಮೇಲ್​ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಮೂಲಗಳು, ಇದೊಂದು ಹುಸಿ ಮೇಲ್​ ಆಗಿದ್ದು, ಆಟಗಾರರ ಮೇಲೆ ಯಾವುದೇ ದಾಳಿ ಸಾಧ್ಯತೆ ಇಲ್ಲ. ಆದರೆ ಸದ್ಯ ಆಟಗಾರರ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದೆ.

ಟಿ-20 ಹಾಗೂ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿರುವ ಕೊಹ್ಲಿ ಪಡೆ, ಪ್ರವಾಸದ ಕೊನೆಯ ಭಾಗವಾದ ಟೆಸ್ಟ್ ಸರಣಿಯನ್ನು ಆಗಸ್ಟ್ 22ರಿಂದ ಆರಂಭಿಸಲಿದೆ. ಸೆಪ್ಟೆಂಬರ್​ 3ರಂದು ವಿಂಡೀಸ್ ಪ್ರವಾಸ ಕೊನೆಗೊಳ್ಳಲಿದೆ.

Intro:Body:

ಕೊಹ್ಲಿ ಬಳಗಕ್ಕೂ ಕಾಡಿದ ಉಗ್ರದಾಳಿ ಭೀತಿ... ಭದ್ರತೆ ಹೆಚ್ಚಳ 

ಹೈದರಾಬಾದ್: ಕಾಶ್ಮೀರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ಇದೇ ವಿಚಾರ ಇದೀಗ ದೂರದ ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೂ ತಟ್ಟಿದೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್​(ಪಿಸಿಬಿ)ಗೆ ಅನಾಮಧೇಯ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ ಬಳಗದ ಮೇಲೆ ಉಗ್ರ ದಾಳಿ ಸಾಧ್ಯತೆ ಇದೆ ಎಂದು ಮೇಲ್ ಮಾಡಿದ್ದ. ಪಿಸಿಬಿ ಈ ಮಾಹಿತಿಯನ್ನು ಐಸಿಸಿ ಮೂಲಕ ಬಿಸಿಸಿಐಗೆ ರವಾನಿಸಿತ್ತು.

ಮೇಲ್​ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಅದೊಂದು ಹುಸಿ ಮೇಲ್​​​ ಎನ್ನುವುದು ಸ್ಪಷ್ಟವಾಗಿದೆ. ಆದರೆ ಈ ಸಂದೇಶ ತಲುಪಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪಿಸಿಬಿಗೆ ಬಂದ ಮೇಲ್​ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಮೂಲಗಳು, ಇದೊಂದು ಹುಸಿ ಮೇಲ್​ ಆಗಿದ್ದು, ಆಟಗಾರರ ಮೇಲೆ ಯಾವುದೇ ದಾಳಿ ಸಾಧ್ಯತೆ ಇಲ್ಲ. ಆದರೆ ಸದ್ಯ ಆಟಗಾರರ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದೆ.

ಟಿ-20 ಹಾಗೂ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿರುವ ಕೊಹ್ಲಿ ಪಡೆ, ಪ್ರವಾಸದ ಕೊನೆಯ ಭಾಗವಾದ ಟೆಸ್ಟ್ ಸರಣಿಯನ್ನು ಆಗಸ್ಟ್ 22ರಿಂದ ಆರಂಭಿಸಲಿದೆ. ಸೆಪ್ಟೆಂಬರ್​ 3ರಂದು ವಿಂಡೀಸ್ ಪ್ರವಾಸ ಕೊನೆಗೊಳ್ಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.