ಚೆನ್ನೈ(ತಮಿಳುನಾಡು) : ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಇದೀಗ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಉಭಯ ತಂಡಗಳು ಚೆನ್ನೈಗೆ ಬಂದಿಳಿದಿವೆ.
ಇಲ್ಲಿನ ಎಂ.ಎ. ಚಿದಂಬರಂ ಮೈದಾನದಲ್ಲಿ ಭಾನುವಾರ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಂದಿನ ಎರಡು ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಲಿದೆ. ಉಳಿದಂತೆ ವಿಶಾಖಪಟ್ಟಣಂನಲ್ಲಿ ಡಿಸೆಂಬರ್ 18 ಹಾಗೂ ಒಡಿಶಾದ ಕಟಕ್‌ನಲ್ಲಿ ಡಿಸೆಂಬರ್ 22 ರಂದು ಪಂದ್ಯಗಳು ನಡೆಯಲಿವೆ.
-
Vanakkam chennai 🙏🏻 pic.twitter.com/JRKVgvCVWN
— Kuldeep yadav (@imkuldeep18) December 12, 2019 " class="align-text-top noRightClick twitterSection" data="
">Vanakkam chennai 🙏🏻 pic.twitter.com/JRKVgvCVWN
— Kuldeep yadav (@imkuldeep18) December 12, 2019Vanakkam chennai 🙏🏻 pic.twitter.com/JRKVgvCVWN
— Kuldeep yadav (@imkuldeep18) December 12, 2019
ಚೆನ್ನೈಗೆ ಬಂದಿಳಿದಿರುವ ಬಗ್ಗೆ ಟೀಂ ಇಂಡಿಯಾ ಆಟಗಾರರಾದ ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಅವರ ಜಾಗ ತಂಬಲು ಕನ್ನಡಿಗ ಮಯಾಂಕ್ ಅಗರ್‌ವಾಲ್ ಆಯ್ಕೆಯಾಗಿದ್ದಾರೆ.